ಶನಿವಾರ, ಮಾರ್ಚ್ 28, 2020
19 °C

ಕೋಲಾರಕ್ಕೆ ಸತ್ಯಭಾಮ ನೂತನ ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಅವರನ್ನು ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರ ಅವರ ಸ್ಥಾನಕ್ಕೆ ಐಎಎಸ್ ಅಧಿಕಾರಿ ಸಿ.ಸತ್ಯಭಾಮ ಅವರನ್ನು ನೇಮಕ ಮಾಡಿ ಶನಿವಾರ ಆದೇಶ ಹೊರಡಿಸಿದೆ.

ಸದ್ಯ ತರಬೇತಿಗಾಗಿ ಉತ್ತರಖಂಡದ ಮಸ್ಸೂರಿಗೆ ತೆರಳಿರುವ ಮಂಜುನಾಥ್‌ ಅವರಿಗೆ ಸರ್ಕಾರ ಯಾವುದೇ ಹುದ್ದೆ ತೋರಿಸಿಲ್ಲ. 2018ರ ಆ.1ರಂದು ಜಿಲ್ಲೆಗೆ ವರ್ಗಾವಣೆಯಾಗಿ ಬಂದಿದ್ದ ಮಂಜುನಾಥ್‌ ಒಂದು ತಿಂಗಳ ತರಬೇತಿಗಾಗಿ ಫೆ.17ರಂದು ಮಸ್ಸೂರಿಗೆ ತೆರಳಿದ್ದರು.

ಇದಕ್ಕೂ ಮುನ್ನವೇ ಸರ್ಕಾರ ಫೆ.15ರಂದು ಮಂಜುನಾಥ್‌ರ ಸ್ಥಾನಕ್ಕೆ ಸತ್ಯಭಾಮ ಅವರನ್ನು ವರ್ಗಾವಣೆ ಮಾಡಿತ್ತು. ನಂತರ ವರ್ಗಾವಣೆ ಆದೇಶ ತಡೆಹಿಡಿದು ಮಂಜುನಾಥ್‌ ಅವರನ್ನೇ ಜಿಲ್ಲಾಧಿಕಾರಿ ಹುದ್ದೆಯಲ್ಲಿ ಮುಂದುವರಿಸಿ ಪರಿಷ್ಕೃತ ಆದೇಶ ಹೊರಡಿಸಿತ್ತು. ಇದೀಗ ಈ ಆದೇಶ ಪರಿಷ್ಕರಿಸಿರುವ ಸರ್ಕಾರ ಸತ್ಯಭಾಮ ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ನಿಯೋಜಿಸಿದೆ.

ಸದ್ಯ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿರುವ ಸತ್ಯಭಾಮ ಅವರು ಸೋಮವಾರ (ಮಾರ್ಚ್‌ 9) ಜಿಲ್ಲಾಧಿಕಾರಿಯಾಗಿ ಕಾರ್ಯಭಾರ ವಹಿಸಿಕೊಳ್ಳಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)