ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರದಲ್ಲಿ ಸಿದ್ದರಾಮಯ್ಯ ಕೊನೆ ಆಟ: ಎಸ್.ಮುನಿಸ್ವಾಮಿ

ಜೋಡಿಕೃಷ್ಣಪುರದಲ್ಲಿ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಮುಖಂಡರ ವ್ಯಂಗ್ಯ
Last Updated 6 ಫೆಬ್ರುವರಿ 2023, 5:55 IST
ಅಕ್ಷರ ಗಾತ್ರ

ನರಸಾಪುರ (ಕೋಲಾರ): ‘ಸಿದ್ದರಾಮಯ್ಯ ಅವರನ್ನು ಯಾಮಾರಿಸಿ ಕೋಲಾರಕ್ಕೆ ಕರೆದುಕೊಂಡು ಬಂದವರ ಪರಿಸ್ಥಿತಿ, ತಾಕತ್ತು ಏನೆಂಬುದು ಜಗಜ್ಜಾಹೀರಾಗಿದೆ. ಮೂರು ಬಾರಿ ಬಂದರೂ ಆರು ಮಂದಿ ಕಾಂಗ್ರೆಸ್ ಶಾಸಕರಿಂದ 10 ಸಾವಿರ ಜನರನ್ನು ಸೇರಿಸಲಾಗಲಿಲ್ಲ‘ ಎಂದು ಸಂಸದ ಎಸ್.ಮುನಿಸ್ವಾಮಿ ವ್ಯಂಗ್ಯವಾಡಿದರು.

ನರಸಾಪುರ ಹೋಬಳಿ ಸಮೀಪದ ಜೋಡಿಕೃಷ್ಣಪುರ ಗೇಟ್ ಬಳಿ ಭಾನುವಾರ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

'ಸಿದ್ದರಾಮಯ್ಯ ಅವರಿಗೆ ವಯ
ಸ್ಸಾಗಿದೆ. ಮನೆಯಲ್ಲಿ ಮೊಮ್ಮಕ್ಕಳನ್ನು ಆಡಿಸಿಕೊಂಡು ಇರಬೇಕಾದ ವಯಸ್ಸಿನಲ್ಲಿ ಇನ್ನು ಅಧಿಕಾರ ಬೇಕೆಂದು ರಾಜ್ಯದಲ್ಲಿ ಸುರಕ್ಷಿತ ಕ್ಷೇತ್ರಕ್ಕೆ ಪರದಾಡುತ್ತಿರುವ ಪರಿಸ್ಥಿತಿ ನೋಡುವುದಕ್ಕೆ ಆಗುತ್ತಿಲ್ಲ‘ ಎಂದು ಕುಟುಕಿದರು.

ಅವರ ಕೊನೆ ಆಟಕ್ಕೆ ಕೋಲಾರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜನರ ಸಂಕಷ್ಟಗಳಿಗೆ ಸಮರ್ಪಕವಾಗಿ ಸ್ಪಂದಿಸಿದ್ದರೆ ಅವರಿಗೆ ಇಂತಹ ದುರ್ಗತಿ ಬರುತ್ತಿರಲಿಲ್ಲಎಂದು ವಿಷಾದಿಸಿದರು.

ಕಾಂಗ್ರೆಸ್ ಕಾರ್ಯಕ್ರಮ ಬೆಳಿಗ್ಗೆ ಪ್ರಾರಂಭವಾಗಬೇಕಾಗಿದ್ದರೆ ಜನರಿಲ್ಲದೆ ಸಂಜೆ ಪ್ರಾರಂಭಿಸುವ ದುಸ್ಥಿತಿ ಉಂಟಾಗಿದೆ. ಕಾರ್ಯಕ್ರಮಗಳೆಲ್ಲ ನಿರೀಕ್ಷೆ
ಯಂತೆ ಆಗಲಿಲ್ಲ ಎಂದು ಟೀಕಿಸಿದರು.

’ಸಿದ್ದರಾಮಯ್ಯ ಅವರ ಬಗ್ಗೆ ಸಿ.ಎಂ ಇಬ್ರಾಹಿಂ ಚೆನ್ನಾಗಿ ಹೇಳುತ್ತಾರೆ. ದಲಿತ ಮುಖಂಡರನ್ನು ಮಾತ್ರವಲ್ಲ ಅನೇಕ ಹಿಂದುಳಿದ ನಾಯಕರನ್ನು ಮುಗಿಸಿದರು. ಈ ಪೈಕಿ ಅವರೂ ಯಾಮಾರಿರುವುದನ್ನು ಬಹಳ ಸ್ವಾರಸ್ಯವಾಗಿ ತಿಳಿಸುತ್ತಾರೆ. ಈ ಬಾರಿ ಕೋಲಾರದಲ್ಲಿ ಅವರಿಗೆ ಹಲಾಲ್ ಮಾಡುತ್ತೇನೆ ಎಂದಿದ್ದಾರೆ. ಅವರದ್ದು ಒಡೆದು ಆಳುವ ನೀತಿ‘ ಎಂದು ಟೀಕಿಸಿದರು.

ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಸಂದೀಪ್ ಮಾತನಾಡಿ, 'ಕುಂಕುಮ, ಕೇಸರಿ, ಹಿಂದುತ್ವ ವಿರೋಧಿಸಿ, ಟಿಪ್ಪು ಆರಾಧಿಸುವ ಸಿದ್ದರಾಮಯ್ಯ ಅವರಿಗೆ ಕೋಲಾರದ ಜನರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ‘
ಎಂದರು.

ಕೆಯುಡಿಎ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ, ನಟ ಪ್ರಥಮ್, ಜಿಲ್ಲಾ ಯುವ ಮೋರ್ಚಾ ಬಾಲಾಜಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಮಮತಮ್ಮ, ಮಾಜಿ ತಾ.ಪಂ.ಸದಸ್ಯ ಗೋವಿಂದರಾಜು, ಮುಖಂಡರಾದ ಸಾಮಬಾಬು, ನಾಮಾಲ ಮಂಜುನಾತ್, ಮುರುಗೇಶ್, ಓಹಿಲೇಶ್, ಮಂಜುನಾಥ್ ಸಿಂಗ್, ಭಾರತ, ಹರೀಶ್, ತೇಜಸ್ಸು, ನವೀನ್ ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT