ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಸರ್ಗಿಕ ತರಕಾರಿಯತ್ತ ಹೆಚ್ಚಿದ ಒಲವು

ಶ್ರೀನಿವಾಸಪುರದಲ್ಲಿ ಕೊರೊನಾ ಸಮಸ್ಯೆಯಿಂದ ತರಕಾರಿ ಕೊರತೆ
Last Updated 6 ಏಪ್ರಿಲ್ 2020, 16:56 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಕೊರೊನಾ ಸಮಸ್ಯೆಯಿಂದ ತರಕಾರಿ ಕೊರತೆ ಎದುರಿಸುತ್ತಿರುವ ಗ್ರಾಮೀಣ ಪ್ರದೇಶದ ಜನರು ನೈಸರ್ಗಿಕ ತರಕಾರಿ ಹುಡುಕಿ ತಂದು ಬಳಸುತ್ತಿದ್ದಾರೆ. ಇದರಿಂದ ಜನರು ಬಿಟ್ಟ ದಾರಿಯನ್ನು ಮತ್ತೆ ಹಿಡಿದಂತಾಗಿದೆ.

ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಓಡಾಡುವ ಜನರಿಗೆ ಗುಳ್ಳ ಬದನೆ, ಮಂಗರವಳ್ಳಿ, ಹುಣಸೆ ಚಿಗುರು, ಕುಂದಲಿ ಕೊಂಬು ಮುಂತಾದ ನೈಸರ್ಗಿಕ ತರಕಾರಿಗಳು ಕಣ್ಣಿಗೆ ಬೀಳುತ್ತಿವೆ. ಅವುಗಳ ಬಳಕೆ ಬಗ್ಗೆ ಗೊತ್ತಿರುವ ವ್ಯಕ್ತಿಗಳು ಕಿತ್ತು ತರುತ್ತಿದ್ದಾರೆ.

‘ಯಾವುದೇ ಕೀಟನಾಶಕ ಅಥವಾ ರಾಸಾಯನಿಕ ಗೊಬ್ಬರವಿಲ್ಲದೆ, ನೈಸರ್ಗಿಕವಾಗಿ ಬೆಳೆದ ಈ ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದಾದರೂ, ಬಳಸುವ ವಿಧಾನ ತಿಳಿದಿರಬೇಕು. ಗುಳ್ಳ ಬದನೆ ಕಾಯಿಯನ್ನು ಕೊಯ್ದು ಬೀಜ ತೆಗೆದು ಹೊಟ್ಟನ್ನು ಮಾತ್ರ ಸಾಂಬಾರು ತಯಾರಿಸಲು ಬಳಸಿಕೊಳ್ಳಬೇಕು. ಮಂಗರವಳ್ಳಿಯನ್ನೂ ಸಹ ಮೇಲಿನ ನಾರು ತೆಗೆದು ಸಂಸ್ಕರಿಸಿದ ಮೇಲೆ ಚಟ್ನಿ ತಯಾರಿಸಬೇಕು’ ಎನ್ನುತ್ತಾರೆ ಸಾಹಿತಿ ಸ.ರಘುನಾಥ.

ಕೆಲವರು ಲಾಕ್‌ಡೌನ್‌ನಿಂದ ಉಂಟಾಗಿರುವ ಬಿಡುವಿನ ವೇಳೆಯನ್ನು ನೈಸರ್ಗಿಕ ತರಕಾರಿ ಸಂಗ್ರಹಿಸಲು ಬಳಸಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT