ಗುರುವಾರ , ಜನವರಿ 27, 2022
20 °C

ಮಾಲೂರು: ಸ್ವಾಮಿ ವಿವೇಕಾನಂದ ಜಯಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಲೂರು: ‘ಭಾರತೀಯ ಆಧ್ಯಾತ್ಮಿಕ ಸಂಸ್ಕೃತಿಯನ್ನು ಇಡೀ ವಿಶ್ವಕ್ಕೆ ಸಾರಿದ್ದು ಸ್ವಾಮಿ ವಿವೇಕಾನಂದರ ಹೆಗ್ಗಳಿಕೆಯಾಗಿದೆ’ ಎಂದು ಮಾಜಿ ಶಾಸಕ ಎ. ನಾಗರಾಜು ತಿಳಿಸಿದರು.

ಪಟ್ಟಣದ ಬಸ್‌ನಿಲ್ದಾಣ ಬಳಿಯ ಪುರಸಭೆ ಉದ್ಯಾನದಲ್ಲಿ ತಾಲ್ಲೂಕು ಕಾಂಗ್ರೆಸ್ ಘಟಕದಿಂದ ಬುಧವಾರ ನಡೆದ ಸ್ವಾಮಿ ವಿವೇಕಾನಂದರ ಜಯಂತಿಯಲ್ಲಿ ಅವರು ಮಾತನಾಡಿದರು.

ಅಮೆರಿಕದ ಚಿಕಾಗೋ ನಗರದಲ್ಲಿ ನಡೆದ ವಿಶ್ವ ಧರ್ಮ ಪರಿಷತ್ತಿನಲ್ಲಿ ಶಾಂತಿ ಮತ್ತು ಪ್ರೀತಿಯ ತಳಹದಿಯಲ್ಲಿ ನಿರ್ಮಾಣವಾಗಿರುವ ಭಾರತೀಯ ಆಧ್ಯಾತ್ಮಿಕ ಸಂಸ್ಕೃತಿ ಬಗ್ಗೆ ಸಾರಿದರು. ಇಡೀ ವಿಶ್ವಕ್ಕೆ ಈ ಸಂಸ್ಕೃತಿಯ ಅಗತ್ಯವಿದೆ ಎಂದು ಹೇಳಿದ್ದರು. ಯುವ ಸಂಪನ್ಮೂಲ ವ್ಯರ್ಥವಾಗದೆ ದೇಶದ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯ ಶಕ್ತಿಯಾಗಬೇಕೆಂದು ಪ್ರತಿಪಾದಿಸಿದ್ದಾರೆ ಎಂದರು.

ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಎಂ.ಜಿ. ಮಧುಸೂದನ್, ಪುರಸಭಾ ಸದಸ್ಯರಾದ ಎನ್.ವಿ. ಮುರಳೀಧರ್, ಆರ್. ವೆಂಕಟೇಶ್, ಮುಖಂಡರಾದ ಎ. ಅಶ್ವತ್ಥರೆಡ್ಡಿ, ಬ್ಯಾಲಹಳ್ಳಿ ರಮೇಶ್, ಕೋಳಿ ನಾರಾಯಣ್, ಕರಗ ಶಂಕರಪ್ಪ, ರವಿರೆಡ್ಡಿ, ನಾರಾಯಣರೆಡ್ಡಿ, ನದೀಮ್, ಯುವ ಕಾಂಗ್ರೆಸ್‌ನ ತನ್ವೀರ್, ನವೀನ್ ಕುಮಾರ್, ಶಬೀರ್, ರೋಹಿತ್, ಮಾಸ್ತಿ ಪ್ರವೀಣ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.