ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಸಂಸ್ಕೃತಿಯ ಶ್ರೀಮಂತ ಪರಂಪರೆ ಸಂಕ್ರಾಂತಿ- ಶಾಸಕ ಎಚ್. ನಾಗೇಶ್

Last Updated 15 ಜನವರಿ 2022, 7:53 IST
ಅಕ್ಷರ ಗಾತ್ರ

ಮುಳಬಾಗಿಲು: ಸಂಕ್ರಾಂತಿಯು ಭಾರತೀಯ ಸಂಸ್ಕೃತಿಯ ಶ್ರೀಮಂತ ಪರಂಪರೆ ಹೊಂದಿರುವ ಹಬ್ಬವಾಗಿದೆ ಎಂದು ಶಾಸಕ ಎಚ್. ನಾಗೇಶ್ ಹೇಳಿದರು.

ನಗರದ ಶಿವಕೇಶವ ನಗರದ ಉದ್ಭವ ಶಿವಲಿಂಗೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಶುಕ್ರವಾರ ಸಂಕ್ರಾಂತಿ ರಾಸುಗಳ ಮೆರವಣಿಗೆ ಉದ್ಫಾಟಿಸಿ ಅವರು ಮಾತನಾಡಿದರು.

ಕೃಷಿ, ಹೈನುಗಾರಿಕೆಯಲ್ಲಿರಾಸುಗಳು ಬಹುಮುಖ್ಯ ಪಾತ್ರವಹಿಸುತ್ತವೆ. ಅದಕ್ಕಾಗಿಯೇ ರಾಸುಗಳ ಮೇಲೆ ಭಾರತೀಯರಲ್ಲಿ ವಿಶೇಷ ಅನುಬಂಧ ಏರ್ಪಟ್ಟಿದೆ. ಕೋವಿಡ್ ಕಾರಣ ರಾಸು ಗಳ ಮೆರವಣಿಗೆಯನ್ನು ಸರಳವಾಗಿ ಆಚರಿಸಲಾಗುತ್ತಿದೆ ಎಂದರು.

ನಗರಸಭೆ ಅಧ್ಯಕ್ಷ ರಿಯಾಜ್ ಅಹಮದ್, ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಜಗನ್ಮೋಹನ್ ರೆಡ್ಡಿ, ತಾ.ಪಂ. ಮಾಜಿ ಅಧ್ಯಕ್ಷ ಡಾ.ಎ.ವಿ. ಶ್ರೀನಿವಾಸ್, ತಹಶೀಲ್ದಾರ್ ಶೋಭಿತಾ, ನಗರಸಭೆ ಸದಸ್ಯ ಡಿ. ಸೋಮಣ್ಣ, ಕೆ.ಜೆ. ಮೋಹನ್, ಶಂಕರ ಕೇಸರಿ, ಪಿ.ಎಂ. ಕೃಷ್ಣಮೂರ್ತಿ, ಕೋಳಿ ನಾಗರಾಜ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT