ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುವೆಗೆ ಬಿದ್ದ ಮಹಿಳೆ: ರಕ್ಷಣೆ

Last Updated 2 ಅಕ್ಟೋಬರ್ 2020, 2:29 IST
ಅಕ್ಷರ ಗಾತ್ರ

ಕೆಜಿಎಫ್‌: ರಸ್ತೆಯಲ್ಲಿ ಇದ್ದ ಕಲ್ಲು ಚಪ್ಪಡಿಯನ್ನು ದಾಟಲು ಹೋದ ಮಹಿಳೆಯೊಬ್ಬರು ರಾಜಕಾಲುವೆಗೆ ಬಿದ್ದು ಗಾಯ
ಗೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಸ್ವರ್ಣಕುಪ್ಪಂನಲ್ಲಿ ಬುಧವಾರ ಈ ಘಟನೆ ನಡೆದಿದೆ.

ಬೈಕ್‌ನಲ್ಲಿ ಹೋಗುತ್ತಿದ್ದ ಮಹಿಳೆ ರಸ್ತೆ ಮಧ್ಯದಲ್ಲಿದ್ದ ಕಲ್ಲು ಚಪ್ಪಡಿ ದಾಟಲು ಮೂವರು ಮಕ್ಕಳನ್ನು ಕೆಳಗೆ ಇಳಿಸಿದರು. ನಂತರ ಸ್ಕೂಟರ್‌ನಲ್ಲಿ ಚಪ್ಪಡಿಯನ್ನು ದಾಟಲು ಪ್ರಯತ್ನಿಸಿದ್ದಾರೆ.
ಅಕಸ್ಮಿಕವಾಗಿ ಜಾರಿ ರಾಜಕಾಲುವೆಗೆ ಬಿದ್ದರು. ಕಾಲುವೆಗೆ ಬಿದ್ದ
ತಾಯಿಯನ್ನು ರಕ್ಷಿಸುವಂತೆ ಮಕ್ಕಳು ಅಳುತ್ತ ನೆರೆ ಹೊರೆಯವರನ್ನು ಕರೆಯುವ ದೃಶ್ಯ ಮನಕಲಕುವಂತಿತ್ತು. ಕೂಡಲೇ ಸಮೀಪದಲ್ಲಿದ್ದವರು ಸ್ಥಳಕ್ಕೆ ಧಾವಿಸಿ ಮಹಿಳೆಯನ್ನು ಸುರಕ್ಷಿತವಾಗಿ ಮೇಲೆ ಎತ್ತಿದರು. ಈ ದೃಶ್ಯ ಸಮೀಪದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು.

ನಗರಸಭೆ ರಸ್ತೆಯನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗದ ಕಾರಣ, ಮಹಿಳೆ ಅಪಾಯಕ್ಕೆ ಒಳಗಾಗಿದ್ದರು ಎಂಬ ಟೀಕೆ ವ್ಯಕ್ತವಾಗಿತ್ತು.

ಈ ಸಂಬಂಧವಾಗಿ ಗುರುವಾರ ನಗರಸಭೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶ್ರೀಧರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ರಸ್ತೆಯು ನಗರಸಭೆಗೆ ಸೇರಿದೆ. ಆದರೆ ಒಬ್ಬ ವ್ಯಕ್ತಿ ತನ್ನ ಜಮೀನು ಎಂದು ತಕರಾರು ಎತ್ತಿದ್ದರಿಂದ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಸದ್ಯ ಸರ್ವೆ ಮುಗಿದು, ವರದಿ ಬಂದಿದೆ. ಕೂಡಲೇ ರಸ್ತೆಯನ್ನು ಅಭಿವೃದ್ಧಿಪಡಿಸುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT