ಗುರುವಾರ , ಮೇ 6, 2021
31 °C

ಯುವಕರೇ ಯುವ ಬ್ರಿಗೇಡ್‍ ಶಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೇತಮಂಗಲ: ‘ಸಮಾಜದಲ್ಲಿ ಯುವಕರು ಮನಸ್ಸು ಮಾಡಿದರೇ ಏನು ಬೇಕಾದರೂ ಸಾಧಿಸಬಹುದು. ಸ್ವಾಮಿ ವಿವೇಕಾನಂದ ಯುವ ಬ್ರಿಗೇಡ್‌ಗೆ ಯುವಕರೇ ಶಕ್ತಿಯಾಗಿ ನಿಂತಿದ್ದಾರೆ’ ಎಂದು ಸ್ವಾಮಿ ವಿವೇಕಾನಂದ ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ವೈ.ಎಸ್. ಪ್ರವೀಣ್ ಕುಮಾರ್ ಹೇಳಿದರು.

ನಗರ ಸಮೀಪದ ನಾಗಶೆಟ್ಟಹಳ್ಳಿ ಬಳಿ ನಡೆದ ಕೆಜಿಎಫ್ ತಾಲ್ಲೂಕು ಸ್ವಾಮಿ ವಿವೇಕಾನಂದ ಯುವ ಬ್ರಿಗೇಡ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೆಜಿಎಫ್ ತಾಲ್ಲೂಕಿನ ಪ್ರತಿಯೊಂದು ಗ್ರಾಮದಲ್ಲಿ ಯುವ ಬ್ರಿಗೇಡ್ ಘಟಕ ರಚಿಸಲಾಗುತ್ತದೆ. ಗ್ರಾಮಗಳಲ್ಲಿ ಶಾಲೆಯ ಅಭಿವೃದ್ಧಿ ಕುಂಠಿತ, ರಕ್ತದಾನ ಶಿಬಿರ, ಕ್ರೀಡಾ ಚಟುವಟಿಕೆ, ವೃದ್ಧರಿಗೆ ವೇತನ ಸೇರಿದಂತೆ ಮತ್ತಿತರ ವ್ಯವಸ್ಥೆ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಸೂಲಿಬೆಲೆ ಕೆ.ಆರ್. ದೇವರಾಜ್ ಮಾತನಾಡಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಸಂಸ್ಕೃತಿ ಪರಿಚಯಿಸಿದ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಸ್ಥಾಪನೆ ಮಾಡಿರುವ ಸಂಘಟನೆಯು ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಸಿಂಡಿಕೇಟ್ ಸದಸ್ಯ ರಂಗಪ್ಪ, ಪೊಲೀಸ್ ಇಲಾಖೆಯ ನಾಗೇಶ್, ತಾ.ಪಂ ಮಾಜಿ ಅಧ್ಯಕ್ಷೆ ಮಮತಾ ರಮೇಶ್, ತಾ.ಪಂ ಸದಸ್ಯ ಡಾ.ಕೃಷ್ಣಮೂರ್ತಿ, ಗ್ರಾ.ಪಂ ಮಾಜಿ ಅಧ್ಯಕ್ಷರಾದ ಮುನಿಯಪ್ಪ, ಶ್ರೀನಿವಾಸ್, ಬಿಲ್ಲೇರಹಳ್ಳಿ ಸುಬ್ರಮಣಿ, ಪೂಗಾನಹಳ್ಳಿ ಪುರುಷೋತ್ತಮ್, ರಾಯಸಂದ್ರ ಶ್ರೀನಿವಾಸ್ ರೆಡ್ಡಿ, ಶ್ರೀಕಾಂತ್, ಹರೀಶ್, ಪಂತನಹಳ್ಳಿ ನಾರಾಯಣಸ್ವಾಮಿ, ತುಳಸಿರಾಮ್, ಲೋಕನಾಥ್, ಶಿವಾರೆಡ್ಡಿ, ಸಂಚಿನ್, ಅನಿಲ್, ಸುನಿಲ್, ನವೀನ್, ರೇಣುಕಾ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು