ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಚಕನಿಂದ ಶೌಚಾಲಯ ಸ್ವಚ್ಛ: ವಿಚಾರಣೆ

Last Updated 2 ಜುಲೈ 2021, 4:33 IST
ಅಕ್ಷರ ಗಾತ್ರ

ಕೆಜಿಎಫ್‌: ಗುಟ್ಟಹಳ್ಳಿಯ ಬಂಗಾರು ತಿರುಪತಿ ದೇವಾಲಯದ ಆಡಳಿತ ಕಚೇರಿಯಲ್ಲಿ ಅರ್ಚಕರೊಬ್ಬರು ಶೌಚಾಲಯ ಸ್ವಚ್ಛಗೊಳಿಸಿದ ಪ್ರಕರಣಕ್ಕೆ ಕುರಿತಂತೆ ಗುರುವಾರ ಮಜರಾಯಿ ತಹಶೀಲ್ದಾರ್ ನಾಗವೇಣಿ ಸಿಬ್ಬಂದಿಯ ವಿಚಾರಣೆ ನಡೆಸಿದರು.

ದೇವಾಲಯದ ಹೂವಾಡಿಗ ಹಾಗೂ ಅಂಗಳ ದೇವಾಲಯದ ಅರ್ಚಕ ಲಕ್ಷ್ಮೀನಾರಾಯಣ ಎಂಬುವರು ಜೂನ್‌ 16ರಂದು ಆಡಳಿತ ಕಚೇರಿಯ ಶೌಚಾಲಯದ ಟಬ್ ಸ್ವಚ್ಛ ಮಾಡುತ್ತಿರುವುದು ಹಾಗೂ ದೇವಾಲಯದ ಪ್ರಾಂಗಣದಲ್ಲಿ ಕಸ ಗುಡಿಸುತ್ತಿರುವ ಫೋಟೊ ವೈರಲ್ ಆಗಿತ್ತು.

ಈ ಸಂಬಂಧ ‘ಪ್ರಜಾವಾಣಿ’ ಬುಧವಾರ ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಆಗಮಿಸಿದ ಮುಜರಾಯಿ ತಹಶೀಲ್ದಾರ್ ನಾಗವೇಣಿ ಕಚೇರಿಯ ಕಾರ್ಯ ನಿರ್ವಾಹಕ ಸುಬ್ರಹ್ಮಣಿ, ಪೇಷ್ಕಾರ್ ಗೋವಿಂದಪ್ಪ, ದೇವಾಲಯದ ಅರ್ಚಕರು ಮತ್ತು ಸಿಬ್ಬಂದಿಯನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದರು.

‘ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗಿದೆ. ಜಿಲ್ಲಾಧಿಕಾರಿ ಅವರು ಮುಂದಿನ ಕ್ರಮಕೈಗೊಳ್ಳಲಿದ್ದಾರೆ. ವರದಿಯನ್ನು ಅವರಿಗೆ ನೀಡಲಾಗುವುದು. ವರದಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದು ತಹಶೀಲ್ದಾರ್ ನಾಗವೇಣಿ
ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT