ಕೋಲಾರ: ಇಂಟರ್ನೆಟ್ ಯುಗದಲ್ಲಿ ಯುವಜನರು ದೈಹಿಕ ಆರೋಗ್ಯಕ್ಕಾಗಿ ಮಲ್ಟಿಜಿಮ್, ಅತ್ಯಾಧುನಿಕ ಫಿಟ್ನೆಸ್ ಕೇಂದ್ರಗಳ ಮೊರೆ ಹೋಗುತ್ತಿದ್ದಾರೆ. ಆದರೆ, ಕೆಲವು ಹುಡುಗರು ಇಂದಿಗೂ ಗರಡಿಮನೆಯಲ್ಲಿ ಕಸರತ್ತು ಮಾಡುತ್ತಿದ್ದು, ಪರಂಪರೆಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ ಎಂದು ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿ.ಮಂಜುನಾಥ್ ತಿಳಿಸಿದರು.

ನಗರದ ಟೇಕಲ್ ವೃತ್ತದಲ್ಲಿರುವ ಕೋಲಾರ ವ್ಯಾಯಾಮ ಶಾಲೆಯಲ್ಲಿ (ಗರಡಿ ಮನೆ) ಕ್ರೀಡಾ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಗರಡಿ ಮನೆ ಸಂಸ್ಕೃತಿ ಎಂದಿಗೂ ಅಳಿಯುವುದಿಲ್ಲ. ಇಲ್ಲಿಯ ಐತಿಹಾಸಿಕ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಗರಡಿಮನೆಗಳಿಗೆ ಸರ್ಕಾರದ ಸಹಾಯ ಬೇಕಾಗಿದೆ ಎಂದರು.

ಶ್ರೀಭುವನೇಶ್ವರಿ ಕನ್ನಡ ಸಂಘದ ಜಿಲ್ಲಾಧ್ಯಕ್ಷ ತ್ಯಾಗರಾಜ್ ಮಾತನಾಡಿ, ‘ಗರಡಿಮನೆಯಲ್ಲಿ ಸ್ಥಳೀಯರ ಸಹಾಯದಿಂದ ಜಿಮ್ ಪರಿಕರಗಳನ್ನು ತಂದಿಟ್ಟಿದ್ದಾರೆ. ಜಿಮ್ ಇಷ್ಟಪಡುವವರು ಜಿಮ್ ಜೊತೆಗೆ ಗರಡಿಮನೆಯಲ್ಲೂ ಕಸರತ್ತು ಮಾಡಲು ಅವಕಾಶವಿದೆ. ಯುವಕರು ಜಿಮ್ ಕಡೆ ಹೊರಳುತ್ತಿರುವ ಕಾರಣ ಗರಡಿಮನೆಯಲ್ಲೇ ಜಿಮ್ ಉಪಕರಣ ಇಡಲಾಗಿದೆ. ಗರಡಿ ಮನೆಗಳನ್ನು ಉಳಿಸಲು ಇದು ಅನಿವಾರ್ಯವಾಗಿದೆ’ ಎಂದು ಹೇಳಿದರು.

ದೇಹದಾರ್ಢ್ಯ ಸ್ಪರ್ಧೆಯಲ್ಲಿ ವಿಜೇತರಾದ ಬಜರಂಗದಳ ಬಾಬು, ಹೃತ್ವಿಕ್, ತರಬೇತುದಾರ ಶಿವಕುಮಾರ್, ವಸಂತ್ ಅವರನ್ನು ಸನ್ಮಾನಿಸಲಾಯಿತು.

ನಗರಸಭೆ ಮಾಜಿ ಸದಸ್ಯ ಮೋಹನ್ ಪ್ರಸಾದ್ ಬಾಬು, ಕುಸ್ತಿಪಟು ಶ್ರೀನಿವಾಸ್, ಅಗ್ನಿ ಶಾಮಕದಳ ಆನಂದ್, ರಮೇಶ್, ಗೋಪಾಲ್, ಮುಕೇಶ್, ಕೀಲುಕೋಟೆ ಹರೀಶ್, ಶಿವು, ಹರ್ಷ, ಶರತ್ ತರಬೇತುದಾರ ಯಶವಂತ್, ಧೀರಜ್, ಸರ್ವೇಶ್, ಪ್ರವೀಣ್, ನಾಗರಾಜ್, ಗಣೇಶ್, ಮಂಜು, ಸುರೇಶ್ ಬಾಬು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.