ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಲೂರು: ತಮಿಳು ಲಿಪಿಯ 2 ಶಾಸನ ಪತ್ತೆ

Published : 10 ಸೆಪ್ಟೆಂಬರ್ 2024, 16:08 IST
Last Updated : 10 ಸೆಪ್ಟೆಂಬರ್ 2024, 16:08 IST
ಫಾಲೋ ಮಾಡಿ
Comments

ಕೋಲಾರ: ಮಾಲೂರು ತಾಲ್ಲೂಕಿನ ಟೇಕಲ್–ಮಾಸ್ತಿ ಮಾರ್ಗದ ಚಿಕ್ಕದಾನವಳ್ಳಿ ಗ್ರಾಮದಲ್ಲಿ ಈಚೆಗೆ ತಮಿಳು ಲಿಪಿಯ ಎರಡು ಶಾಸನಗಳು ಪತ್ತೆಯಾಗಿವೆ.

ಒಂದು ಶಾಸನವು ಸುದೀರ್ಘವಾದ ಮಾಹಿತಿ ಹೊಂದಿದೆ. ಇದರ ಕಾಲವನ್ನು ಕ್ರಿ.ಶ 1232 ಎಂದು ಅಂದಾಜಿಸಲಾಗಿದೆ. ಇದು ಪೂರ್ವಾದಿರಾಯರು ಮತ್ತವರ ವಂಶೀಕರಿಗೆ ಸೇರಿದ್ದು ಎಂಬುದು ಗೊತ್ತಾಗಿದೆ. ಮಾಶಂದಿ ನಾಡು ಮಾಲೂರು ತಾಲ್ಲೂಕಿನ ಬಹುಭಾಗವನ್ನು ಆಕ್ರಮಿಸಿದ್ದು, ಇದು 13ನೇ ಶತಮಾನದಲ್ಲಿ ವ್ಯಾಪಕ ಪ್ರಸಿದ್ಧಿ ಗಳಿಸಿತ್ತು. ಅವರ ಕಾಲದಲ್ಲಿ ಆಲಯ ನಿರ್ಮಾಣಗಳು, ದಾನಧರ್ಮಗಳು ನಡೆದವು. ಇದರ ಸಾಕ್ಷಿಯಾಗಿ ಹಲವಾರು ಶಾಸನಗಳು ಈಗಾಗಲೇ ತಾಲ್ಲೂಕಿ ವಿವಿಧೆಡೆ ದೊರೆತಿವೆ. ಹೊಸ ಶಾಸನದಲ್ಲೂ ಬ್ರಾಹ್ಮಣರಿಗೆ ದಾನ ನೀಡಿರುವ ಮಹತ್ವವಾದ ಸಂಗತಿಗಳಿವೆ ಎಂದು ಇತಿಹಾಸ ತಜ್ಞರು ತಿಳಿಸಿದ್ದಾರೆ.

ಮತ್ತೊಂದು ಶಾಸನವನ್ನು ಅಧ್ಯಯನ ಮಾಡಲಾಗುತ್ತಿದೆ. ಗ್ರಾಮಸ್ಥರ ನೆರವಿನಿಂದ ಕ್ಷೇತ್ರಕಾರ್ಯವನ್ನು ನಡೆಸಲಾಗಿದ್ದು, ಇತಿಹಾಸ ಶಾಸನ ತಜ್ಞರಾದ ಕೆ.‌ಆರ್.ನರಸಿಂಹನ್, ಕೆ.ಧನಪಾಲ್ ಜೊತೆ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು, ಕಾಲೇಜು ಅಧ್ಯಾಪಕ ಗೋಪಿ, ಎಳೇಸಂದ್ರ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ಧರು. ಎಳೇಸಂದ್ರ ಶಾಲೆಯ ಶಿಕ್ಷಕಿ ಶೈಲಜಾ ವಿ. ಅವರ ಸಹಕಾರದಿಂದ ಶಾಸನದ ಶೋಧ ಸಾಧ್ಯವಾಗಿದೆ.

ಶಾಸನವನ್ನು ಓದಲು ತಮಿಳು ಲಿಪಿ ತಜ್ಞರಾದ ಪಿ.ವಿ.ಕೃಷ್ಣಮೂರ್ತಿ, ಕೃಷ್ಣಗಿರಿ ಗೋವಿಂದರಾಜನ್ ನೆರವಾಗಿದ್ದಾರೆ. ಗ್ರಾಮಸ್ಥರು ಎರಡೂ ಶಾಸನಗಳನ್ನು ಸುರಕ್ಷಿತವಾದ ಸ್ಥಳದಲ್ಲಿ ಸಂರಕ್ಷಣೆ ಮಾಡುವ ಜವಾಬ್ದಾರಿ ಹೊತ್ತಿದ್ಧಾರೆ.

ಮಾಲೂರು ತಾಲ್ಲೂಕಿನ ಚಿಕ್ಕದಾನವಳ್ಳಿ ಗ್ರಾಮದಲ್ಲಿ ದೊರೆತ ತಮಿಳು ಲಿಪಿ ಶಾಸನದೊಂದಿಗೆ ಇತಿಹಾಸ ತಜ್ಞರು, ವಿದ್ಯಾರ್ಥಿಗಳು, ಶಿಕ್ಷಕರು, ಗ್ರಾಮಸ್ಥರು
ಮಾಲೂರು ತಾಲ್ಲೂಕಿನ ಚಿಕ್ಕದಾನವಳ್ಳಿ ಗ್ರಾಮದಲ್ಲಿ ದೊರೆತ ತಮಿಳು ಲಿಪಿ ಶಾಸನದೊಂದಿಗೆ ಇತಿಹಾಸ ತಜ್ಞರು, ವಿದ್ಯಾರ್ಥಿಗಳು, ಶಿಕ್ಷಕರು, ಗ್ರಾಮಸ್ಥರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT