ಬುಧವಾರ, ಮೇ 18, 2022
23 °C

ಸಪ್ತಪದಿ ತುಳಿದ ಎರಡು ಜೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೇತಮಂಗಲ: ಧಾರ್ಮಿಕ ದತ್ತಿ ಇಲಾಖೆ ಹಾಗೂ ಮುಜರಾಯಿ ಇಲಾಖೆಯ ಸಪ್ತಪದಿ ಯೋಜನೆಯಡಿ ನಡೆದ ಸರಳ ಸಾಮೂಹಿಕ ವಿವಾಹದಲ್ಲಿ ಎರಡು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಪ್ರಸಿದ್ಧ ಬಂಗಾರು ತಿರುಪತಿ ದೇವಾಲಯದ ಅವರಣದಲ್ಲಿ ಬುಧವಾರ ಹಿಂದೂ ಸಂಪ್ರದಾಯದಂತೆ ಕೋಲಾರ ತಾಲ್ಲೂಕಿನ ಶ್ರೀಕಾಂತ್ ಹಾಗೂ ಚೈತ್ರಾ, ಬಂಗಾರಪೇಟೆ ತಾಲ್ಲೂಕಿನ ಹರೀಶ್ ಕುಮಾರ್ ಹಾಗೂ ನಂದಿನಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮುಜರಾಯಿ ಇಲಾಖೆಯ ಮಾರ್ಗಸೂಚಿಯಂತೆ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ವಿವಾಹ ನಡೆಸಿಕೊಟ್ಟರು.

ಕೆಜಿಎಫ್ ತಹಶೀಲ್ದಾರ್ ಸುಜಾತಾ ಸ್ಥಳಕ್ಕೆ ಭೇಟಿ ನೀಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಜೋಡಿಗಳಿಗೆ ಶುಭ ಹಾರೈಸಿ, ದೇವಾಲಯದಿಂದ ವಧು ಹಾಗೂ ವರರಿಗೆ ನೀಡುವ ನೆರವಿನ ಚೆಕ್ ವಿತರಿಸಿದರು.

ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಸುಬ್ರಮಣಿ, ಪೇಷ್ಕರ್ ಸುರೇಶ್, ವಿಶ್ವ ಹಿಂದೂ ಪರಿಷತ್‌ನ ಸಿಂಧ್ಯಾ ಜೀ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.