ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರಪ್ರದೇಶಕ್ಕೆ ಯೂರಿಯಾ ಮಾರಾಟ

ಪರವಾಗನಿ ರದ್ದುಪಡಿಸಲು ರೈತ ಸಂಘದ ಪದಾಧಿಕಾರಿಗಳು ಆಗ್ರಹ
Last Updated 19 ಸೆಪ್ಟೆಂಬರ್ 2020, 2:57 IST
ಅಕ್ಷರ ಗಾತ್ರ

ಮುಳಬಾಗಿಲು: ರೈತರಿಗೆ ಅವಶ್ಯಕತೆ ಇರುವ ಯೂರಿಯಾ ಅಭಾವ ಸೃಷ್ಟಿಯಾಗದಂತೆ ಸಮರ್ಪಕವಾಗಿ ವಿತರಣೆ ಮಾಡುವ ಜತೆಗೆ ಯೂರಿಯಾವನ್ನು ಆಂಧ್ರಪ್ರದೇಶಕ್ಕೆ ಮಾರುವ ಅಂಗಡಿಗಳ ಪರವಾನಿಗೆ ರದ್ದು ಮಾಡಬೇಕು ಎಂದು ಒತ್ತಾಯಿಸಿ ರೈತ ಸಂಘದ ಪದಾಧಿಕಾರಿಗಳು ಶುಕ್ರವಾರ ಕೃಷಿ ಇಲಾಖೆ ಮುಂದೆ ಪ್ರತಿಭಟನೆ ನಡೆಸಿದರು.

ಈ ವೇಳೆ ರೈತ ಸಂಘದ ರಾಜ್ಯಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ‘ಜಿಲ್ಲೆಯಾದ್ಯಂತ ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿರುವುದರಿಂದ ಉತ್ತಮ ರಾಗಿ ಬೆಳೆ ನಿರೀಕ್ಷೆಯಲ್ಲಿ ರೈತರಿದ್ದಾರೆ. ಆದರೆ, ರಾಗಿ ಬೆಳೆಗೆ ಅವಶ್ಯವಾಗಿ ಬೇಕಾಗಿರುವ ಯೂರಿಯಾ ದಾಸ್ತಾನು ಕೊರತೆ ಮತ್ತು ಕೃತಕ ಅಭಾವ ಸೃಷ್ಟಿ ಮಾಡಿತಾಲ್ಲೂಕಿನಾದ್ಯಂತ ರಸ ಗೊಬ್ಬರ ವ್ಯಾಪಾರಿಗಳು ರೈತರ ಜತೆ ಚಲ್ಲಾಟವಾಡುತ್ತಿದ್ದಾರೆ’ ಎಂದು ದೂರಿದರು.

ಸರ್ಕಾರ ಯೂರಿಯಾ ಕೊರತೆ ಇಲ್ಲ. ಸರ್ಕಾರ ಮತ್ತು ಖಾಸಗಿ ಅಂಗಡಿಗಳ ಮೂಲಕ ಸರಬರಾಜು ಮಾಡುತ್ತಿದ್ದೇವೆ ಎಂದು ಹೇಳುತ್ತಿದೆ.ಮತ್ತೊಂದೆಡೆ ಅಂಗಡಿಗಳಲ್ಲಿ ಯೂರಿಯಾ ದಾಸ್ತಾನು ಇದ್ದರೂ,ಸ್ಥಳೀಯರಿಗೆ ನೀಡದೇ ಹೊರರಾಜ್ಯದ ಆಂಧ್ರಪ್ರದೇಶಕ್ಕೆ ಹೆಚ್ಚಿನ ಬೆಲೆಗಾಗಿ ಮಾರಾಟ ಮಾಡುತ್ತಿದ್ದಾರೆ. ಎಂದು ಆರೋಪಿಸಿದರು.

ಪ್ರಮುಖರಾದ ವಿಜಯಪಾಲ್, ಮೇಲಾಗಣಿ ದೇವರಾಜ್, ಕಾವೇರಿ ಸುರೇಶ್, ಅಣ್ಣಿಹಳ್ಳಿ ನಾಗರಾಜ್, ಸುಪ್ರಿಂ ಚಲ, ಬಂಗಾರಪೇಟೆ ತಾಲ್ಲೂಕು ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಕೋಲಾರ ತಾಲ್ಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಸಾಗರ್, ಶಿವು, ನಾರಾಯಣ್, ಮಂಜುನಾಥ್, ಮೀಸೆ ವೆಂಕಟೇಶಪ್ಪ, ಮಂಗಸಂದ್ರ ತಿಮ್ಮಣ್ಣ, ಜಗದೀಶ್, ವಿನೋದ್, ಸುಧಾಕರ್ ಇದ್ದರು.

ಯೂರಿಯಾ ಅಗತ್ಯ
‘ತಾಲ್ಲೂಕಿನಾದ್ಯಂತ ಸುಮಾರು 25,295 ಹೆಕ್ಟರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಸಲಾಗಿದೆ. ರಾಗಿ, ಭತ್ತ, ಮುಸಕಿನ ಜೋಳ, ಮೇವಿನ ಜೋಳ, ತೊಗರಿ ಅವರೆ, ಅಲಸಂದಿ, ಬೆಳೆಗಳಿಗೆ ಅವಶ್ಯಕತೆಯಾಗಿ ಈಗ ಯೂರಿಯಾ ಬೇಕಾಗಿದೆ. ಹಾಗಾಗಿ ಕೂಡಲೇ ಅಕ್ರಮ ದಾಸ್ತಾನು ಮಾಡಿರುವ ಖಾಸಗಿ ಅಂಗಡಿಗಳ ವಿರುದ್ಧ ಕ್ರಮ ಕೈಗೊಂಡು ಸಮರ್ಪಕವಾಗಿ ಯೂರಿಯಾ ವಿತರಣೆ ಮಾಡಬೇಕು’ ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಫಾರುಕ್‌ ಪಾಷಾ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT