ಕೋಲಾರ: ಜಿಲ್ಲೆಯಲ್ಲಿ ವೀರಗಲ್ಲುಗಳು ಹಾಗೂ ಶಾಸನಗಳನ್ನು ಸಂರಕ್ಷಣೆ ಮಾಡಬೇಕಿದ್ದು, ಜಿಲ್ಲಾಡಳಿತದೊಂದಿಗೆ ಪ್ರತಿ ನಾಗರಿಕರ ಸಹಕಾರ ಅಗತ್ಯ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ತಿಳಿಸಿದರು.

ಅರಿವು ಶಿವಪ್ಪ ನೇತೃತ್ವದಲ್ಲಿ ನಗರದ ಜಿಲ್ಲಾಡಳಿತ ಕಚೇರಿಯಲ್ಲಿ ಸೋಮವಾರ ತಮ್ಮನ್ನು ಭೇಟಿಯಾದ ವೀರಗಲ್ಲು ಹಾಗೂ ಶಾಸನಗಳ ಸಂರಕ್ಷಣಾ ನಿಯೋಗದ ಜೊತೆ ಅವರು ಸಮಾಲೋಚನೆ ನಡೆಸಿದರು.

ತಾಲ್ಲೂಕಿನ ಅರಾಭಿಕೊತ್ತನೂರಿನಲ್ಲಿ ಈಗಾಗಲೇ ವೀರಗಲ್ಲುಗಳ ಉದ್ಯಾನ ಸ್ಥಾಪಿಸಲಾಗಿರುವುದು ಇತಿಹಾಸದ ದಾಖಲೆಯಾಗಿದೆ. ಇದು ಪ್ರೇಕ್ಷಣಾ ಸ್ಥಳ ಮಾತ್ರವಲ್ಲ; ಇತಿಹಾಸದ ಕುರುಹು ಕೂಡ. ಪ್ರತಿ ಶಾಸನ ಹಾಗೂ ವೀರಗಲ್ಲಿನ ಹಿಂದೆ ಒಂದೊಂದು ಕಥೆ ಇದೆ. ಸಮಾಜಕ್ಕಾಗಿ ಜೀವ ಸಮರ್ಪಿಸಿಕೊಂಡು, ಚರಿತ್ರೆಯಲ್ಲಿ ಜೀವಂತವಾಗಿದ್ದಾರೆ ಎಂದರು.

ವೀರಗಲ್ಲು ಮತ್ತು ಶಾಸನಗಳು ನಮ್ಮ ಪರಂಪರೆ ತಿಳಿಸುವ ದಾಖಲೆಗಳಾಗಿವೆ. ಇವುಗಳನ್ನು ಉಳಿಸಿಕೊಳ್ಳಲು ಐತಿಹಾಸಿಕ ಪ್ರಜ್ಞೆ ಅಗತ್ಯ. ಮುಂದಿನ ಪೀಳಿಗೆಗಳಿಗೆ, ಇತಿಹಾಸದ ವಿದ್ಯಾರ್ಥಿಗಳಿಗೆ ನೈಜವಾದ ಇತಿಹಾಸದ ಚರಿತ್ರೆಯ ಅರಿವು ಅಗತ್ಯವಾಗಿರುತ್ತದೆ. ಇವು ಇತಿಹಾಸದ ಕೊಂಡಿಗಳಾಗಿವೆ. ಇಂತಹ ಸ್ಮಾರಕಗಳನ್ನು ಗುರುತಿಸಿ ಅಭಿವೃದ್ಧಿಪಡಿಸಬೇಕಾಗಿದೆ. ಪುರತತ್ವ ಇಲಾಖೆಯ ಜೊತೆಗೆ ಇತಿಹಾಸ ಆಸಕ್ತರು ನಿಯೋಗದ ಸಹಕಾರದೊಂದಿಗೆ ಜಿಲ್ಲೆಯ ಐತಿಹಾಸಿಕ ಸಂಸ್ಕೃತಿ ಎಲ್ಲೆಡೆ ಪಸರಿಸುವಂತಾಗಬೇಕಿದೆ ಎಂದು ಹೇಳಿದರು.

ಜಿಲ್ಲೆಯ ಐತಿಹಾಸಿಕ ತಾಣಗಳ ಜೂತೆಗೆ ಪ್ರವಾಸಿ ತಾಣಗಳನ್ನೂ ಅಭಿವೃದ್ದಿ ಪಡಿಸಬೇಕಾಗಿದೆ, ಕೋಲಾರಮ್ಮ, ಸೋಮೇಶ್ವರ, ತೇರಹಳ್ಳಿಯ ಗಂಗಾಧರೇಶ್ವರ ದೇವಾಲಯ, ಅರಾಭಿಕೊತ್ತನೂರು, ಹುತ್ತೂರು. ಹುನ್ಕುಂದ, ಆವಣಿ, ವಿರೂಪಾಕ್ಷ, ಕುರುಡುಮಲೆ ಮುಂತಾದವುಗಳು ಪ್ರಮುಖವಾಗಿದ್ದು ಐತಿಹಾಸಿಕ ದಾಖಲೆಗಳಾಗಿದೆ ಎಂದು ವಿವರಿಸಿದರು.

ತೆರೆಯ ಮರೆಯಲ್ಲಿನ ಸ್ಥಳಗಳನ್ನು ಗುರುತಿಸುವ ಕೆಲಸ ಮಾಡಬೇಕಾಗಿದೆ. ನಿಯೋಗದಲ್ಲಿ ಶಾಸನ ತಜ್ಞರು, ಇತಿಹಾಸ ತಜ್ಞರು ಸೇರಿದಂತೆ ಇತರರನ್ನು ಜೊತೆಗೂಡಿಸಿ ಜಿಲ್ಲೆಯ ಸಂಸ್ಕೃತಿ, ಪರಂಪರೆ, ಇತಿಹಾಸವನ್ನು ಪಸರಿಸಲು ಇನ್ನಷ್ಟು ಅಭಿವೃದ್ದಿಪಡಿ ಮಾಡೋಣ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಇತಿಹಾಸ ಅಧ್ಯಾಪಕ ಹಾಗೂ ಅರಿವು ಭಾರತ ಸಂಸ್ಥೆಯ ಶಿವಪ್ಪ ಅರಿವು, ನಿವೃತ್ತ ಪ್ರಾಧ್ಯಾಪಕ ಶಂಕರ್, ಇತಿಹಾಸ ತಜ್ಞ ಬೆಂಗಳೂರಿನ ಸ್ವಾಮಿನಾಥನ್, ಮುಖಂಡರಾದ ಪಂಡಿತ್ ಮುನಿವೆಂಕಟಪ್ಪ, ಟಿ.ವಿಜಯಕುಮಾರ್, ಕಸಾಪ ಜಿಲ್ಲಾ ಅಧ್ಯಕ್ಷ ಗೋಪಾಲಗೌಡ ಇದ್ದರು.

ಮ್ಯೂಸಿಯಂಗೆ ಸ್ಥಳ ನೀಡಲು ಸಿದ್ಧ

ಜಿಲ್ಲೆಯ ಐತಿಹಾಸಿಕ ದಾಖಲೆಗಳಾದ ಶಾಸನಗಳು ವೀರಗಲ್ಲುಗಳು ತಾಳೆಗೆರೆ ದಾಖಲೆ ಸಂಗ್ರಜದ ಮ್ಯೂಸಿಯಂ ಮಾಡುವುದಾದರೆ ಜಿಲ್ಲಾಡಳಿತ ಜಾಗ ನೀಡಲು ಸಿದ್ಧವಿದೆ. ಇದೊಂದು ಜಿಲ್ಲಾ ಪ್ರೇಕ್ಷಣೀಯ ಸ್ಥಳವಾಗಬೇಕಿದೆ. ಸರ್ಕಾರದ ಮಟ್ಟದಲ್ಲಿ ಮಂಜೂರಾತಿ ಮಾಡಿಸಲು ತಜ್ಞರು ಜನಪ್ರತಿನಿಧಿಗಳು ಗಮನ ಸೆಳೆಯುವಂತಾಗಬೇಕು ಎಂದು ಎಂ.ಆರ್.ರವಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.