ಕೋಲಾರ: ತಾಲ್ಲೂಕಿನ ವಿಟ್ಟಪ್ಪನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕೋಲಾರ ಈಶಾನ್ಯ ಕ್ಷೇತ್ರ ಮಟ್ಟದ ಅತ್ಯುತ್ತಮ ಬಿಎಂಸಿ ಕೇಂದ್ರ ಪ್ರಶಸ್ತಿ ಲಭಿಸಿದೆ.

ಕೋಮುಲ್ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಕೆ.ವೈ.ನಂಜೇಗೌಡ, ಸಂಘದ ಅಧ್ಯಕ್ಷ ಮಂಜುನಾಥ್ ಹಾಗೂ ಕಾರ್ಯದರ್ಶಿ ಡೇರಿ ವೆಂಕಟೇಶ್ ಅವರಿಗೆ ಪ್ರದಾನ ಮಾಡಿದರು.

ಮಂಜುನಾಥ್ ಹಾಗೂ ವೆಂಕಟೇಶ್ ಮಾತನಾಡಿ, ‘ಈ ಗೌರವವು ಸಂಘದ ಹಾಲು ಉತ್ಪಾದಕರಿಗೆ ಸಲ್ಲುತ್ತದೆ. ಡೇರಿಯಲ್ಲಿ ಪಶು ಆಹಾರದಲ್ಲಿ ಮೂಟೆಗೆ ₹ 100 ಕಡಿಮೆ, ಮಿನರಲ್ ಮಿಚೆಲ್ ಮತ್ತು ಜೋಳ ಉಚಿತವಾಗಿ ಉತ್ಪಾದಕರಿಗೆ ನೀಡಲಾಗುತ್ತಿದೆ. ಪ್ರತಿ ವರ್ಷ ದೀಪಾವಳಿಗೆ ಬೋನಸ್ ಮತ್ತು ತುಪ್ಪ, ಸರ್ವ ಸದಸ್ಯರ ಸಭೆಯಲ್ಲಿ ಉಡುಗೊರೆ ನೀಡಲಾಗುತ್ತಿದೆ. ಈ ಸಾಲಿನಲ್ಲಿ ₹ 9.76 ಲಕ್ಷ ನಿವ್ವಳ ಲಾಭ ಗಳಿಸಿದೆ’ ಎಂದರು.

ನಿರ್ದೇಶಕರಾದ ವಡಗೂರು ಹರೀಶ್, ಜಯಸಿಂಹ ಕೃಷ್ಣಪ್ಪ, ಕಾಡೇನಹಳ್ಳಿ ನಾಗರಾಜ್, ಹನುಮೇಶ್, ಚಂಜಿಮಲೆ ರಮೇಶ್, ಚೆಲುವನಹಳ್ಳಿ ನಾಗರಾಜಪ್ಪ, ಕೆ.ಕೆ.ಮಂಜು, ಶ್ರೀನಿವಾಸ್, ಕೋಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಗೋಪಾಲಮೂರ್ತಿ, ಅಡ್ಮಿನ್ ನಾಗೇಶ್, ಉಪವ್ಯವಸ್ಥಾಪಕ ಡಾ.ಮಹೇಶ್, ವಿಸ್ತರಣಾಧಿಕಾರಿ ನಾಗಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.