ದುಬೈ: ಏಷ್ಯಾ ಕಪ್ 17ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದ್ದು, ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿದೆ ಎಂದು ಪಾಕ್ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ಹೇಳಿದ್ದಾರೆ.
.Asia Cup IND vs PAK Final: ಪ್ರಶಸ್ತಿ ಮೇಲೆ ಕಣ್ಣು, ಪ್ರತಿಷ್ಠೆಯೂ ಪಣಕ್ಕೆ.
ಫೈನಲ್ ಪಂದ್ಯಕ್ಕೂ ಮುನ್ನ ಭಾರತವು ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ, ಉತ್ತಮ ಆಟದ ಮೂಲಕ ಭಾರತವನ್ನು ಪಾಕಿಸ್ತಾನವು ಸೋಲಿಸಬಹುದು. ಸೂಪರ್ –4 ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಕೇವಲ 136 ರನ್ಗಳನ್ನು ರಕ್ಷಿಸಿಕೊಂಡಿದ್ದು, ಪಾಕಿಸ್ತಾನದ ಮನೋಬಲವನ್ನು ಹೆಚ್ಚಿಸಿದೆ. ಪಾಕ್ ಬೌಲಿಂಗ್ ದಾಳಿಯು ಫೈನಲ್ನಲ್ಲೂ ಹಾಗೇ ಮುಂದುವರಿಯುವ ವಿಶ್ವಾಸವಿದೆ ಎಂದು ವಾಸಿಂ ಅಕ್ರಂ ತಿಳಿಸಿದ್ದಾರೆ.

‘ಟಿ–20 ಕ್ರಿಕೆಟ್ನಲ್ಲಿ ಏನು ಬೇಕಾದರೂ ಸಂಭವಿಸಬಹುದು. ಒಂದು ಉತ್ತಮ ಇನ್ನಿಂಗ್ಸ್ ಪಂದ್ಯದ ಗತಿಯನ್ನೇ ಬದಲಿಸಬಲ್ಲದು. ಉತ್ತಮ ಕ್ರಿಕೆಟ್ ಆಡುವ ತಂಡಕ್ಕೆ ಗೆಲ್ಲುವ ಅರ್ಹತೆಯಿದೆ. ಭಾರತದ ವಿರುದ್ಧ ಪಂದ್ಯ ಗೆಲ್ಲಬೇಕಾದರೆ, ಪಾಕಿಸ್ತಾನವು ವಿಶ್ವಾಸದಿಂದ ಮೈದಾನಕ್ಕೆ ಕಣಕ್ಕಿಳಿಯಬೇಕಿದೆ’ ಎಂದಿದ್ದಾರೆ.

ಭಾರತದ ಆರಂಭಿಕ ಆಟಗಾರರಾದ ಅಭಿಷೇಕ್ ಶರ್ಮಾ, ಶುಭಮನ್ ಗಿಲ್ ಅವರ ವಿಕೆಟ್ಗಳು ಪಂದ್ಯದ ಗತಿಯನ್ನು ಬದಲಿಸಲಿವೆ. ಹೊಸ ಚೆಂಡಿನಲ್ಲೇ ಅವರ ವಿಕೆಟ್ ಪಡೆದರೆ, ಪಾಕ್ ಮೇಲುಗೈ ಸಾಧಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

41 ವರ್ಷಗಳ ಏಷ್ಯಾ ಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉಭಯ ತಂಡಗಳು ಫೈನಲ್ ಪಂದ್ಯದಲ್ಲಿ ಸೆಣಸಾಡಲಿವೆ.
.ಭಾರತ–ಪಾಕ್ ಫೈನಲ್ಗೆ ವೇದಿಕೆ ಸಿದ್ಧ: ಟೂರ್ನಿಯಲ್ಲಿ ಉಭಯ ತಂಡಗಳ ಸಾಧನೆ ಹೇಗಿತ್ತು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.