ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲೂರು: ಸರ್ವಧರ್ಮೀಯರ ವೀರಾಂಜನೇಯ

ರೈಲ್ವೆ ಸೇತುವೆ ಬಳಿ ಇರುವ ದೇವಾಲಯ
Last Updated 6 ಜನವರಿ 2020, 11:36 IST
ಅಕ್ಷರ ಗಾತ್ರ

ಮಾಲೂರು: ಸರ್ವಧರ್ಮಿಯರ ಆರಾಧ್ಯ ದೈವವಾಗಿ ಮಾರ್ಪಟ್ಟಿರುವ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಸೋಮವಾರದಂದು ವಿಶೇಷ ಪೂಜಾ ಕೈಕರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.

ಪಟ್ಟಣದ ರೈಲ್ವೆ ಸೇತುವೆ ಬಳಿ ಇರುವ ಈ ದೇಗುಲವು ವರ್ಷ ಪೂರ್ತಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಪ್ರಸಿದ್ಧಿ ಪಡೆಯುತ್ತಿದೆ.

ಸಾಮಾನ್ಯವಾಗಿ ಕಪಿಗಳು ವಯಸ್ಸಾಗಿ ಮೃತಪಡುವುದು ಯಾರ ಕಣ್ಣಿಗೂ ಕಾಣಿಸುವುದಿಲ್ಲ. ಆದರೆ, 1970ರಲ್ಲಿ ವಯಸ್ಸಾದ ಕಪಿಯೊಂದು ಪಟ್ಟಣದ ರೈಲ್ವೆ ಸೇತುವೆ ಬಳಿ ಇರುವ ಶಾಮಣ್ಣ ಅವರ ಕೃಷಿ ಭೂಮಿಯಲ್ಲಿ ಮೃತಟ್ಟಿದನ್ನು ಗಮನಿಸಿದ ಪುರೋಹಿತ ವೇಣುಗೋಪಾಲಾಚಾರಿ, ಶಾಮಣ್ಣ ಅವರಿಗೆ ಮಾಹಿತಿ ನೀಡಿ ‘ಮುದಿ ಕಪಿ ನಿಮ್ಮ ಸ್ಥಳದಲ್ಲಿ ಬಂದು ಪ್ರಾಣ ಬಿಟ್ಟಿದೆ. ಇಲ್ಲೇ ಹನುಮನ ದೇವಾಲಯ ನಿರ್ಮಾಣ ಮಾಡಿ’ ಎಂದು ತಿಳಿಸಿದರು. ಅದರಂತೆ ನಡೆದಿದ್ದೇನೆ’ ಎನ್ನುತ್ತಾರೆ ಟ್ರಸ್ಟ್ ಅಧ್ಯಕ್ಷ ಶಾಮಣ್ಣ.

ನಂತರ ಪಿ.ಶಾಮಣ್ಣ ಇತರರ ಸಹಕಾರದೊಂದಿಗೆ 1970ರಲ್ಲಿ ವೀರಾಂಜನೇಯಸ್ವಾಮಿ ದೇವಾಲಯ ಸ್ಥಾಪನೆ ಮಾಡಿದರು ದೇವಾಲಯ ಪುರೋಹಿತರಾದ ವೇಣುಗೋಪಾಲಾಚಾರ್ 2009ರಲ್ಲಿ ಹಿಮಾಲಯದಲ್ಲಿರುವ ಹನುಮನ ಗುಹೆಗೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಗುಹೆಯಲ್ಲಿ ಕಂಡ ರಾಮ– ಸೀತಾ– ಲಕ್ಷ್ಮಣ ಮತ್ತು ಆಂಜನೇಯನ ಭಾವಚಿತ್ರ ನೋಡಿ ಪುಳಕಿತರಾಗಿದ್ದಾರೆ. ಅದೇ ರೀತಿ ಶ್ರೀರಾಮಲಕ್ಷ್ಮಣ ಸೀತೆ ಮತ್ತು ಆಂಜನೇಯನ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ.

ಗೌರವಾಧ್ಯಕ್ಷ ಎ.ಶ್ರೀನಿವಾಸ್ ರೆಡ್ಡಿ, ಉಪಾಧ್ಯಕ್ಷರಾದ ಲಕ್ಷ್ಮಿನಾರಾಯಣ್, ಕೆಎಲ್.ನಾಗರಾಜ್, ವಿ.ಶ್ರೀನಿವಾಸ್, ಕಾರ್ಯಾಧ್ಯಕ್ಷ ಎಸ್.ವಿ.ಗೋವರ್ಧನ್ ರೆಡ್ಡಿ, ಖಜಾಂಚಿ ಎ.ರಾಮಪ್ಪ, ಕಾರ್ಯದರ್ಶಿ ಟಿ.ಎನ್.ವೆಂಕಟೇಶ್ ಗೌಡ, ಜಂಟಿ ಕಾರ್ಯದರ್ಶಿ ಎಸ್.ಸಿ.ತಿಮ್ಮರಾಯಪ್ಪ, ಜಿ.ರಾಮಾಂಜನೇಯ ನೇತೃತ್ವದಲ್ಲಿ ದೇವರ ಸೇವೆ ನಡೆಯುತ್ತಿದೆ ಎನ್ನುತ್ತಾರೆ ಶಾಮಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT