ಕೋಲಾರ: ಕುಡಿಯುವ ನೀರಿನ ಸಮಸ್ಯೆಗಳುಳ್ಳ ಗ್ರಾಮಗಳ ಪಟ್ಟಿಯನ್ನು ಟಾಸ್ಕ್ ಫೋರ್ಸ್ ಅಧ್ಯಕ್ಷರೂ ಆಗಿರುವ ಶಾಸಕರು ಪರಿಗಣಿಸದೆ ತಮಗೆ ಇಷ್ಟ ಬಂದ ಹಳ್ಳಿಗಳನ್ನು ಸೇರ್ಪಡೆ ಮಾಡುತ್ತಿದ್ದಾರೆ. ಹೀಗಾಗಿ ಬರ ಪರಿಹಾರದಡಿ ಕೊಳವೆ ಬಾವಿ ಕೊರೆಯುವುದೂ ಸೇರಿದಂತೆ ನೀರಿನ ಸಮಸ್ಯೆ ನಿವಾರಣೆ ಕೆಲಸ ಕಷ್ಟವಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಂಗಾಧರಯ್ಯ ಅಸಹಾಯಕತೆ ವ್ಯಕ್ತಪಡಿಸಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣ ದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕಾಮಗಾರಿ ಕೈಗೊಳ್ಳುವುದು ಅಗತ್ಯವಿದೆ ಎಂದು ತಾವು ಸೂಚಿಸುವ ಹಳ್ಳಿಗಳನ್ನು ಪಟ್ಟಿಯಲ್ಲಿ ಶಾಸಕರು ಸೇರಿಸುತ್ತಿಲ್ಲ. ಹೀಗಾಗಿ ಟಾಸ್ಕ್ ಫೋರ್ಸ್ ಸದಸ್ಯರಾಗಿದ್ದರೂ ನಾವು ಏನೂ ಮಾಡಲಾಗುತ್ತಿಲ್ಲ ಎಂದು ನುಡಿದರು.

ಜಿಲ್ಲಾಧಿಕಾರಿ ಗಮನಕ್ಕೆ: ಈ ವಿಷಯದ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಇದೇ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳು ಸಭೆ ನಡೆಸಿದ್ದಾರೆ. ಸಮಸ್ಯೆಗಳಿರುವ ಹಳ್ಳಿಗಳ ಕುರಿತು ಮಾಹಿತಿ ಕೊಟ್ಟರೆ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಬರಪರಿಹಾರ ನಿಧಿ ಅಡಿ 40 ಲಕ್ಷ ರೂಪಾಯಿ ಖರ್ಚು ಮಾಡಿರುವ ಕುರಿತು ಮಾಹಿತಿ ಕೊಡಿ ಎಂದು ಸದಸ್ಯ ಚಂದ್ರಶೇಖರ್ ಕೋರಿದಾಗ, ಅಧಿಕಾರಿ ಗಂಗಾಧರಯ್ಯ ಸ್ವಲ್ಪ ಹೊತ್ತಿನಲ್ಲಿ ಕೊಡುವೆ ಎಂದರು. ಅದಕ್ಕೆ ಆಕ್ಷೇಪಿಸಿದ ಸದಸ್ಯ, ಎರಡು ತಿಂಗಳ ಹಿಂದೆ ಸಭೆ ನಡೆದಾಗಲೂ ಈ ಮಾಹಿತಿ ಕೊಡಲಿಲ್ಲ.

ಈಗಲೂ ಅದೇ ಮಾತನ್ನ ಹೇಳುತ್ತಿದ್ದೀರಿ. ಶಾಸಕರು, ಟಾಸ್ಕ್ಫೋರ್ಸ್ ಕಾರ್ಯವೈಖರಿ ಬಗ್ಗೆ ಟೀಕಿಸುವ ನೀವೇ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಶ್ರಯ- ಅಸಮಾಧಾನ: ಸದಸ್ಯರಾದ ಪುಟ್ಟಮ್ಮ, ಚಂದ್ರಶೇಖರ್ ಮತ್ತಿತರರು, ಆಶ್ರಯ ಯೋಜನೆ ಅಡಿ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸುವ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯರ ಗಮನಕ್ಕೆ ತಂದಿಲ್ಲ, ಗ್ರಾಮಸಭೆ, ವಾರ್ಡ್ ಸಭೆ ನಡೆಸದೆ ಪಟ್ಟಿಗಳನ್ನು ಸಿದ್ಧಪಡಿಸಲಾಗಿದೆ. ಒಂದೇ ಕುಟುಂಬದ ಹಲವರನ್ನು ಆಯ್ಕೆ ಮಾಡಲಾಗಿದೆ. ಗುಡಿಸಲು ವಾಸಿಗಳನ್ನು ಕೈ ಬಿಡಲಾಗಿದೆ ಎಂದು ದೂರಿದರು.

ಸದಸ್ಯ ಕೃಷ್ಣಮೂರ್ತಿ ಮತ್ತಿತರರು ವಾಗ್ವಾದಕ್ಕೆ ಮುಂದಾದರು. ಕೊಂಚ ಕಾಲ ಸದಸ್ಯರನ್ನು ನಿಯಂತ್ರಿಸಲು ಅಧ್ಯಕ್ಷೆ ಎನ್.ರಮಾದೇವಿ, ಉಪಾಧ್ಯಕ್ಷ ಮಂಜುನಾಥ ಪ್ರಯತ್ನಿಸಿದರು. ಈ ವಾಗ್ವಾದವೇ ಸಭೆಯ ಹೆಚ್ಚು ಸಮಯವನ್ನು ನುಂಗಿತು.

ಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ಭಟ್ ಸ್ಪಷ್ಟನೆ ನೀಡಿ, ಪಟ್ಟಿಗಳಿಗೆ ಕೆಲವು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು ಸಹಿ ಮಾಡಿಲ್ಲ. ಅದನ್ನು ರಾಜೀವಗಾಂಧಿ ವಸತಿ ನಿಗಮದ ಗಮನಕ್ಕೆತಂದಿರುವೆ. ಅವರಿಬ್ಬರ ಸಹಿಯೂ ಇದ್ದರೆ ಮಾತ್ರ ಪಟ್ಟಿ ಅಂತಿಮಗಳ್ಳುತ್ತದೆ ಎಂದರು.

ಆಶ್ರಯ ಯೋಜನೆ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸುವ ಮುನ್ನ ಗ್ರಾಮಸಭೆ, ವಾರ್ಡ್ಸಭೆ ನಡೆಸಲಾಗಿದೆಯೇ ಎಂಬ ಕುರಿತ ಪರಿಶೀಲನೆ ನಡೆಸಿ, ಮುಂದಿನ ಸಭೆಗೆ ವರದಿ ನೀಡುವುದು. ಗ್ರಾಮಸಭೆ ಮತ್ತು ವಾರ್ಡ್ ಸಭೆ ಕುರಿತು ತಾಲ್ಲೂಕು ಪಂಚಾಯಿತಿ ಸದಸ್ಯರಿಗೆ ಮಾಹಿತಿ ಕೊಡಬೇಕು. ಗ್ರಾಮಸಭೆ, ವಾರ್ಡ್ಸಭೆಗೆ ಬಾರದ ಅಧಿಕಾರಿಗಳ ಪಟ್ಟಿ ಕೊಡಬೇಕು ಎಂದು ನಿರ್ಣಯಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.