ಬುಧವಾರ, ಜನವರಿ 20, 2021
21 °C
ಗಂಗಾವತಿಯಿಂದ ಗುಜರಾತ್‌ಗೆ ಪಡಿತರ ಅಕ್ಕಿ ಅಕ್ರಮ ಸಾಗಣೆ

₹5.72 ಲಕ್ಷ ಮೌಲ್ಯದ ಅಕ್ಕಿ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಷ್ಟಗಿ: ಗಂಗಾವತಿಯಿಂದ ಗುಜರಾತ್‌ ರಾಜ್ಯಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ₹5.72 ಲಕ್ಷ ಮೌಲ್ಯದ ಪಡಿತರ ಅಕ್ಕಿಯನ್ನು ಅಧಿಕಾರಿಗಳು ಭಾನುವಾರ ವಶಪಡಿಸಿಕೊಂಡಿದ್ದಾರೆ. ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಕಂದಾಯ ಇಲಾಖೆಗೆ ಬಂದ ಮಾಹಿತಿ ಅನ್ವಯ ಅಧಿಕಾರಿಗಳು ಕ್ಯಾದಿಗುಪ್ಪಾ ಚೆಕ್‌ಪೋಸ್ಟ್ ಬಳಿ ಲಾರಿಯನ್ನು ತಪಾಸಣೆ ಮಾಡಿದಾಗ ಅದರಲ್ಲಿ 50 ಕೆ.ಜಿ ತೂಕದ ಒಟ್ಟು 220 ಕ್ವಿಂಟಲ್ ಅಕ್ಕಿ ಇದ್ದಿದ್ದು ಪತ್ತೆಯಾಗಿದೆ.

ಅಕ್ಕಿಯನ್ನು ಪಡಿತರ ಯೋಜನೆಗೆ ಗೋಣಿ ಚೀಲಗಳಿಗೆ ಬದಲು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಲಾಗಿತ್ತು. ಜಿಲ್ಲೆಯಿಂದ ಬೇರೆ ಬೇರೆ ರಾಜ್ಯಗಳಿಗೆ ಪಡಿತರ ಯೋಜನೆಯ ಅಕ್ಕಿಗಳನ್ನು ಸಾಗಿಸುವುದು ಸಾಮಾನ್ಯವಾಗಿದ್ದು, ಕೆಲ ವರ್ತಕರು ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಖಚಿತ ಮಾಹಿತಿ ಕಂದಾಯ ಇಲಾಖೆಗೆ ಬಂದಿತ್ತು ಎಂದು ತಿಳಿಸಲಾಗಿದೆ.

ಗಂಗಾವತಿ ಎಪಿಎಂಸಿ ಪ್ರಾಂಗಣದಲ್ಲಿರುವ ತಾವರಗೇರಾ ಮೂಲದ ಸಾಯಿನಾಥ್ ಟ್ರೇಡರ್ಸ್ ಜನರಲ್‌ ಮರ್ಚಂಟ್ ಮತ್ತು ಕಮಿಷನ್ ಏಜೆಂಟ್ ಎಂಬ ಅಂಗಡಿಯಿಂದ ಗುಜರಾತ್‌ನ ಬರಸದ್ ಎಂಬಲ್ಲಿಗೆ ಈ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂದು ಕಂದಾಯ ಇಲಾಖೆ ಆಹಾರ ನಿರೀಕ್ಷಕ ನಿತಿನ್ ಅಗ್ನಿ ದೂರು ನೀಡಿದ್ದಾರೆ. ಅದರ ಅನ್ವಯ ಇಲ್ಲಿಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಕ್ಕಿ, ಲಾರಿ ಜಪ್ತಿ ಮಾಡಿ ರಾಜಸ್ತಾನ ಮೂಲದ ಲಾರಿ ಚಾಲಕ ಧನಂಜಯ ಪಟೇಲ್, ಕ್ಲೀನರ್ ಶಂಕರಲಾಲ್ ಪಟೇಲ್‌ ಎಂಬುವವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.