ಗಂಗಾವತಿ: ಆಟೊ–ಲಾರಿ ಡಿಕ್ಕಿಯಾಗಿ ಮೂವರು ಸಾವು
ಗಂಗಾವತಿ (ಕೊಪ್ಪಳ ಜಿಲ್ಲೆ): ಗಂಗಾವತಿ-ಕೊಪ್ಪಳ ಮುಖ್ಯರಸ್ತೆಯ ಮುಕ್ಕುಂಪಿ ಕ್ರಾಸ್ ಬಳಿ ಭಾನುವಾರ ರಾತ್ರಿ ಆಟೊರಿಕ್ಷಾ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೊಪ್ಪಳ ತಾಲ್ಲೂಕಿನ ಬೂದಗುಂಪಾ ಗ್ರಾಮದ ಫಕೀರಪ್ಪ (30), ಭೀಮಣ್ಣ (35) ಹಾಗೂ ರಾಮಣ್ಣ ಮೃತರು. ರೈತ ಮಂಜುನಾಥ ಜಬ್ಬಲಗುಡ್ಡ (28) ಎಂಬುವರಿಗೆ ಗಾಯಗಳಾಗಿವೆ.
ಮಂಜುನಾಥ ಜಬ್ಬಲಗುಡ್ಡ ಅವರ ತೋಟದಲ್ಲಿ ಬೆಳೆದಿದ್ದ ಶೇಂಗಾವನ್ನು ರಾಶಿ ಮಾಡಿ, ಆಟೊದಲ್ಲಿ ಗಂಗಾವತಿ ಮಾರುಕಟ್ಟೆಗೆ ಒಯ್ಯಲಾಗಿತ್ತು. ಅಲ್ಲಿಂದ ಹಿಂದಿರುಗುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.