ಕಾರಟಗಿ: ‘ಗುರು ಬರೀ ಅಕ್ಷರ ಕಲಿಸಿದರೆ ಸಾಲದು, ವಿದ್ಯಾರ್ಥಿಗಳ ಭವಿಷ್ಯದ, ಬದುಕಿನ ಮಾರ್ಗದರ್ಶಿಯೂ ಆಗಿರಬೇಕು. ವಿದ್ಯಾರ್ಥಿಗಳಾದವರು ಕಲಿತ ವಿದ್ಯೆಯನ್ನು ಮೌಲ್ಯಯುತ ಬದುಕನ್ನಾಗಿಸಿಕೊಂಡು ಸಮಾಜದಲ್ಲಿ ಮತ್ತೊಬ್ಬರಿಗೆ ಮಾದರಿಯಾಗಿ, ಆದರ್ಶ ಜೀವನ ನಡೆಸಿದಾಗಲೇ ಗುರುವಿಗೆ ವಂದನೆ ಸಲ್ಲಿಸಿದಂತಾಗುವುದು. ಅದುವೇ ಗುರುವಂದನೆ’ ಎಂದು ನಿವೃತ್ತ ಶಿಕ್ಷಕ ಎ.ಜಿ.ತಿಮ್ಮಾಪೂರ ಹೇಳಿದರು.

1987-88ನೇ ಸಾಲಿನ ಎಸ್ಎಸ್ಎಲ್ಸಿ ಹಳೆಯ ವಿದ್ಯಾರ್ಥಿಗಳು ಪಟ್ಟಣದ ಅಮ್ಮಾಮಹೇಶ್ವರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಗುರುವಂದನಾ, ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಿವೃತ್ತ ಶಿಕ್ಷಕ ಎಚ್.ಎಸ್. ಗುರುಕಾರ ಮಾತನಾಡಿ,‘ನಮ್ಮಿಂದ ಅಕ್ಷರ ಕಲಿತು, ನಿಮ್ಮದೇ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿ ಮುನ್ನೆಡೆಯುತ್ತಿರುವುದು ನಮಗೆಲ್ಲ ಹರ್ಷ ತಂದಿದೆ’ ಎಂದು ಹೇಳಿದರು.

ಹಳೆಯ ವಿದ್ಯಾರ್ಥಿಗಳಾದ ಚಂದ್ರಕಲಾ ಸುಂಕದ, ಅಂದಾನಮ್ಮ, ಗಿರಿಜಾ ಸುಂಕದ, ಅಮರಮ್ಮ ಹುಬ್ಬಳ್ಳಿ, ಮಹಾದೇವಿ ಇಲಕಲ್, ಸುಬ್ಬಾರಾವ್ ಮರ್ಲಾನಹಳ್ಳಿ, ಶರಣಯ್ಯಸ್ವಾಮಿ ಬೇವಿನಾಳ ಮೊದಲಾದವರು ವಿದ್ಯಾರ್ಥಿ ಜೀವನದ ಘಟನೆಗಳನ್ನು ನೆನೆದು ಭಾವುಕರಾಗಿ ಮಾತನಾಡಿದರು.

ನಿವೃತ್ತ ಶಿಕ್ಷಕರಾದ ಮಲ್ಲಿಕಾರ್ಜುನ ವಿ.ತಿಮ್ಮಾಪುರ, ಎಂ.ನಾಗಪ್ಪ ಮಡಿವಾಳರ, ಎಚ್.ಎಸ್. ಗುರಿಕಾರ, ಎ.ಜಿ. ತಿಮ್ಮಾಪೂರ ಅವರನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ, ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಪುಷ್ಪಾರ್ಚನೆ ಮಾಡುವುದರೊಂದಿಗೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ನಾಲ್ವರು ಶಿಕ್ಷಕರನ್ನು ಹಳೆಯ ವಿದ್ಯಾರ್ಥಿಗಳು ಸನ್ಮಾನಿಸಿ, ಕೃತಜ್ಞತೆ ಸಲ್ಲಿಸಿದರು.

ಶ್ರಾವಣಿ ಕೂಡ್ಲುರ ಭರತನಾಟ್ಯ, ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ನಿವೃತ್ತ ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು ಚಾಲನೆ ನೀಡಿದರು.

ಪ್ರಾಸ್ತಾವಿಕವಾಗಿ ಬಸವರಾಜ ಕೂಡ್ಲೂರು ಮಾತನಾಡಿದರು. ಶಿಕ್ಷಕಿ ಅಂಬಮ್ಮ ನಿರೂಪಿಸಿದರು. ಜಿ. ಯಂಕನಗೌಡ ವಂದಿಸಿದರು.

ಹಳೆಯ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳೊಂದಿಗೆ ತಮ್ಮ ಕುಟುಂಬದ ಸದಸ್ಯರೊಂದಿಗೆ ಬೆರೆತು ದಿನವಿಡಿ ಸಂಭ್ರಮಿಸಿದರು.

ಹಳೆಯ ವಿದ್ಯಾರ್ಥಿಗಳಾದ ಶಂಕರ್, ಕೆ.ಸಿದ್ದನಗೌಡ, ಮೌನೇಶ್ ಕೆ, ಚನ್ನಪ್ಪ ಸಜ್ಜನ, ಚನ್ನಪ್ಪ ಅಂಗಡಿ, ಪಂಪಾಪತಿ ಬೇವಿನಾಳ, ನಾಗವೇಣಿ ಕೆಂಭಾವಿ ಮರಿಬಸಮ್ಮ ಗದ್ದಿ, ಅಬ್ದುಲ್ ರೆಹಮಾನ, ಅಮರೇಶ ಹೊನ್ನುಗುಡಿ, ಪಂಪಾಪತಿ ಕೊಟಗಿ, ಜಡೆಪ್ಪ ಸಾಲಗುಂದಿ, ಸುರೇಶ ಚನ್ನಹಳ್ಳಿ, ಅಯ್ಯೇಂದ್ರ ವಿಶ್ವಕರ್ಮ, ಖದೀರಸಾಬ, ಬಸವರಾಜ ಬಂಡಿ, ಪ್ರಭಾವತಿ ಬಳ್ಳಾರಿ, ಕುಸುಮಾ ಮೈಲಾಪುರ ಸಹಿತ ಅನೇಕ ವಿದ್ಯಾರ್ಥಿಗಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.