ಕೊಪ್ಪಳ: ಕೊಪ್ಪಳ ರೈಲ್ವೆ ನಿಲ್ದಾಣದ ಮೂಲಕ ಬೆಂಗಳೂರು ಸೇರಿದಂತೆ ವಿವಿಧ ಮಾರ್ಗಗಳಿಗೆ ಹೊಸ ರೈಲುಗಳನ್ನು ಪ್ರಾರಂಭಿಸಬೇಕು ಎಂದು ರೈಲ್ವೆ ಜನಪರ ಹೋರಾಟ ಸಮಿತಿ ಪದಾಧಿಕಾರಿಗಳು ಗುರುವಾರ ಹುಬ್ಬಳ್ಳಿಯ ರೈಲ್ ಸೌಧದಲ್ಲಿ ಕಾರ್ಯದರ್ಶಿ ಸುನಿಲ್ ಅವರ ಮೂಲಕ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಸಮಿತಿ ಅಧ್ಯಕ್ಷ ಎಸ್.ಎ.ಗಫಾರ್. ಗೌರವಾಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು, ಉಪಾಧ್ಯಕ್ಷ ಹನುಮೇಶ್ ಗುಂಡೂರು, ಕಾರ್ಯದರ್ಶಿ ಮಖಬೂಲ್ ರಾಯಚೂರು, ಸಹ ಕಾರ್ಯದರ್ಶಿ ಶಿವಪ್ಪ ಹಡಪದ ತೆರಳಿ ‘ಬೆಂಗಳೂರು ಹೊಸಪೇಟೆ ಬೆಂಗಳೂರು ಈ ರೈಲನ್ನು ಕುಷ್ಟಗಿ ತನಕ ವಿಸ್ತರಿಸಬೇಕು. ಹುಬ್ಬಳ್ಳಿಯಿಂದ ಬೀದರ್ಗೆ ಇಂಟರ್ಸಿಟಿ ರೈಲು ಆರಂಭಿಸಬೇಕು. ನಿತ್ಯ ಬೆಳಿಗ್ಗೆ 8.30ಕ್ಕೆ ಬಳ್ಳಾರಿಯಿಂದ ಹುಬ್ಬಳ್ಳಿಗೆ, ಮಧ್ಯಾಹ್ನ 2:30ಕ್ಕೆ ಹುಬ್ಬಳ್ಳಿಯಿಂದ ಬಳ್ಳಾರಿಗೆ ಹೊಸದಾಗಿ ಡೆಮೊ ಪ್ಯಾಸೆಂಜರ್ ರೈಲು ಆರಂಭಿಸಬೇಕು’ ಎಂದು ಮನವಿಯಲ್ಲಿ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.