ಶುಕ್ರವಾರ, ಜನವರಿ 17, 2020
22 °C

ಆರ್.ಟಿ.ಒ ಕಚೇರಿ ಮೇಲೆ ಎಸಿಬಿ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ನಗರದ ಆರ್.ಟಿ.ಒ ಕಚೇರಿ ಮೇಲೆ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದರು.

ನ್ಯಾಯಾಧೀಶರಿಂದ ಶೋಧನಾ ವಾರೆಂಟ್‌ ಪಡೆದು, ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ದಿಢೀರ್ ದಾಳಿ ನಡೆಸಿದ ಅಧಿಕಾರಿಗಳು ಕಚೇರಿ ಸಿಬ್ಬಂದಿಗಳ ವಿಚಾರಣೆ ನಡೆಸಿದರು. ಆರ್.ಟಿ.ಒ ಕಚೇರಿಯಲ್ಲಿ ಕೆಲ ಶಂಕಿತ ಏಜೆಂಟರು ದೊರಕಿದ್ದು, ಅವರನ್ನು ಸಹ ವಿಚಾರಣೆ ನಡೆಸಿದ್ದಾರೆ.

ಕೊಪ್ಪಳ ಎಸಿಬಿಯ ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪ, ಬಳ್ಳಾರಿ ಎಸಿಬಿ ಡಿವೈಎಸ್ಪಿ ಚಂದ್ರಕಾಂತ ಪೂಜಾರ ನೇತೃತ್ವದಲ್ಲಿ ದಾಳಿನಡೆದಿದೆ. ಸಂಜೆವರೆಗೂ ತಪಾಸಣೆ ನಡೆದಿದ್ದು, ಸಮಂಜಸ ಕಾರಣ ನೀಡದ ಕಾರಣ 7 ಜನ ಖಾಸಗಿ ಏಜೆಂಟ್‌ಗಳು ಹಾಗೂ 4 ಜನ ಡ್ರೈವಿಂಗ್ ಸ್ಕೂಲ್‌ ಏಜೆಂಟ್‌ಗಳಿಂದ ₹ 1,69, 668 ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದರು.

ಎಸಿಬಿ ಇನ್‌ಸ್ಪೆಕ್ಟರ್‌ಗಳಾದ ಎಸ್‌.ಎಸ್‌.ಬೀಳಗಿ, ಗುರುರಾಜ್ ಮೈಲಾರ್‌, ಕೆ.ಪಿ.ರವಿಕುಮಾರ್, ಪಿ.ಎಸ್‌.ಹಿರೇಮಠ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು