ಕೊಪ್ಪಳ: ಇಲ್ಲಿನ ಗವಿಸಿದ್ಧೇಶ್ವರ ಮಠದ ಜಾತ್ರೆಗೆ ಬರುವ ಭಕ್ತರಿಗೆ ಜ. 4ರಿಂದ 7ರ ತನಕ ಗವಿಮಠದ ಶಾಲಾ ಕಾಲೇಜು ಹಾಗೂ ವಿವಿಧ ಶಾಲಾ ಕಾಲೇಜು ಸಂಘ ಸಂಸ್ಥೆಗಳ ಕಲ್ಯಾಣ ಮಂಟಪ, ಸಭಾಭವನಗಳಲ್ಲಿ ಸುಮಾರು ಹತ್ತು ಸಾವಿರಕ್ಕಿಂತ ಹೆಚ್ಚು ಭಕ್ತರಿಗೆ ವಸತಿ ಕಲ್ಪಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.

ವಸತಿ ಕೇಂದ್ರಗಳಲ್ಲಿ ಸ್ನಾನ, ಶೌಚಾಲಯ, ಸೊಳ್ಳೆಬತ್ತಿ, ಮೇಣದ ಬತ್ತಿ, ಜಮಖಾನ, ಹಾಗೂ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಇರಲಿದೆ. ಪ್ರತಿಯೊಂದು ಸ್ಥಳ ಮತ್ತು ಕೊಠಡಿಗಳಲ್ಲಿ ಸಮರ್ಪಕ ವಿದ್ಯುತ್, ಸುರಕ್ಷತೆ ಮತ್ತು ವಾಹನಗಳನ್ನು ನಿಲ್ಲಿಸುವ ವ್ಯವಸ್ಥೆ ಮಾಡಲಾಗಿದೆ. ಸ್ತ್ರೀಯರು ಮತ್ತು ಪುರುಷರಿಗೆ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಇದೆ. ಪ್ರತಿ ವಸತಿ ಸ್ಥಳಕ್ಕೂ ವೈದ್ಯಕೀಯ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಇರುತ್ತಾರೆ.

ವಸತಿ ವ್ಯವಸ್ಥೆ ಸ್ಥಳಗಳು: ಗವಿಸಿದ್ಧೇಶ್ವರ 2000 ವಿದ್ಯಾರ್ಥಿಗಳ ಉಚಿತ ಪ್ರಸಾದ ನಿಲಯ, ಶಾರದಮ್ಮ ವಿ. ಕೊತಬಾಳ ಬಿಬಿಎಂ ಕಾಲೇಜು, ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯ, ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯ, ಗವಿಸಿದ್ಧೇಶ್ವರ ಪ್ರೌಢಶಾಲೆ, ಶಿವಶಾಂತವೀರ ಪಬ್ಲಿಕ್ ಶಾಲೆ, ಕೇತೇಶ್ವರ ಕಲ್ಯಾಣ ಮಂಟಪ ಕೊಪ್ಪಳ, ಪಾಂಡುರಂಗ ದೇವಸ್ಥಾನ, ಸ್ವಾಮಿ ವಿವೇಕಾನಂದ ಸಿಬಿಎಸ್ಇ, ವಾಸವಿ ಮಂಗಲ ಭವನ, ಮಧುಶ್ರೀ ಗಾರ್ಡನ್ ರೂಮ್, ಮಾಸ್ತಿ ಪಬ್ಲಿಕ್ ಸ್ಕೂಲ್, ಬಾಲಾಜಿ ಫಂಕ್ಷನ್ ಹಾಲ್ ಹತ್ತಿರ ರೂಮ್, ಭಾವಸಾರ ಕ್ಷತ್ರೀಯ ಸಮಾಜ ಪಾಂಡುರಂಗ ದೇವಸ್ಥಾನ ಮಾರುಕಟ್ಟೆ ಹತ್ತಿರ, ಮಳೆಮಲ್ಲೇಶ್ವರ ಯಾತ್ರಾ ನಿವಾಸ ಈ ಸ್ಥಳಗಳಲ್ಲಿ ಭಕ್ತರಿಗೆ ಉಚಿತವಾಗಿ ವಸತಿಗೆ ಅವಕಾಶ ಕಲ್ಪಿಸಲಾಗಿದೆ.

ಗವಿಮಠದ ಆವರಣದಲ್ಲಿ ಉಚಿತ ವಸತಿಗಾಗಿ ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಶಾಂತವೀರ ಶಿರೂರಮಠ 9845394735, ಮಂಜುನಾಥಸ್ವಾಮಿ ಬಿ., 8310525457, ಪ್ರವೀಣ ಯರಗಟ್ಟಿ 8050356291 ಅವರನ್ನು ಸಂಪರ್ಕಿಸಿ.

- ಭರಪೂರ ದಾಸೋಹ

ಗವಿಸಿದ್ಧೇಶ್ವರ ಜಾತ್ರೆಯ ಮಹಾದಾಸೋಹಕ್ಕಾಗಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮಹಾಲಿಂಗಪುರ ಗ್ರಾಮದ ಭಕ್ತರು 60 ಕ್ವಿಂಟಲ್ ಬೆಲ್ಲ ನೀಡಿದ್ದಾರೆ. ಕೊಪ್ಪಳ ತಾಲ್ಲೂಕಿನ ಟನಕನಕಲ್ ಗ್ರಾಮದ ಭಕ್ತರು ರೊಟ್ಟಿ ಹಾಗೂ ದವಸ ಧಾನ್ಯಗಳನ್ನು ನೀಡಿದ್ದಾರೆ. ಗ್ರಾಮಸ್ಥರು 15 ಸಾವಿರ ಜೋಳದ ರೊಟ್ಟಿ 7 ಪಾಕೆಟ್ ಅಕ್ಕಿ ಮೆಕ್ಕೆ ಜೋಳ 2 ಪಾಕೆಟ್ ನೆಲ್ಲು ಸಲ್ಲಿಸಿದ್ದಾರೆ. ಕಲಬುರಗಿ ಜಿಲ್ಲೆಯ ಹಾಗರಗುಂಡಗಿಯ ಗ್ರಾಮದ ಭಕ್ತರು 40 ಕ್ವಿಂಟಲ್ ತೊಗರಿ ಬೇಳೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.