ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೈವಿಧ್ಯಮಯ ಕೃಷಿಯಿಂದ ಲಾಭ’

Last Updated 10 ಜುಲೈ 2021, 4:13 IST
ಅಕ್ಷರ ಗಾತ್ರ

ಯಲಬುರ್ಗಾ: ‘ವೈವಿಧ್ಯಮಯ ಕೃಷಿ ಪದ್ಧತಿಯಿಂದ ಉತ್ತಮ ಇಳುವರಿ ಪಡೆದು ಆರ್ಥಿಕವಾಗಿ ಸಬಲರಾಗಲು ಪ್ರಯತ್ನಿಸಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ರವಿತೇಜ ಅಬ್ಬಿಗೇರಿ ಹೇಳಿದರು.

ತಾಲ್ಲೂಕಿನ ದಮ್ಮೂರು ಗ್ರಾಮದ ಭೀಮಾಂಬಿಕಾದೇವಿ ಧರ್ಮರಮಠದಲ್ಲಿ ಜರುಗಿದ 372ನೇ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಸ್ತುತ ದೇಶದಲ್ಲಿ ಕೃಷಿ ಉತ್ಪನ್ನಗಳ ಕೊರತೆ ಎದ್ದು ಕಾಣುತ್ತಿದೆ. ಈ ಕೊರತೆ ನೀಗಿಸುವಲ್ಲಿ ರೈತರ ಪಾತ್ರ ದೊಡ್ಡದಿದೆ. ಸರ್ಕಾರ ಈ ನಿಟ್ಟಿನಲ್ಲಿ ರೈತರಿಗೆ ವಿವಿಧ ರೀತಿಯ ಪ್ರೋತ್ಸಾಹ ನೀಡುವ ಮೂಲಕ ಕೃಷಿ ಉತ್ಪನ್ನಗಳ ಹೆಚ್ಚಳಕ್ಕೆ ಗಮನ ಕೊಡಬೇಕಾಗಿದೆ ಎಂದರು.

ಪ್ರಗತಿಪರ ರೈತ ರಸೂಲಸಾಬ ಹಿರೇಮನಿ ಮಾತನಾಡಿ,‘ಕೃಷಿ ವಿಜ್ಞಾನಿಗಳು ರೈತರಿಗೆ ಸಲಹೆ ಸೂಚನೆಗಳನ್ನು ಕೊಡುತ್ತಿದ್ದಾರೆ. ಇದರ ಪ್ರಯೋಜನದಿಂದ ರೈತರು ಕೃಷಿ ಕ್ಷೇತ್ರದಲ್ಲಿಯೇ ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿವೆ’ ಎಂದರು.

ವಿದ್ಯಾರ್ಥಿ ಬಸವಲಿಂಗಪ್ಪ ಮೆಣಸಿನಕಾಯಿ ಮಾತನಾಡಿದರು.

ಯುವ ರೈತರಾದ ದುರಗಪ್ಪ ಹರಿಜನ, ಪ್ರಕಾಶ ರ‍್ಯಾವಣಕಿ ಔಷಧಿ ಹಾಗೂ ಗೊಬ್ಬರದ ಕುರಿತು ಮಾಹಿತಿ ನೀಡಿದರು.

ದಮ್ಮೂರ ಭೀಮಾಂಬಿಕಾದೇವಿ ಶಿವಾನುಭವ ಸೇವಾ ಸಮಿತಿ ಅಧ್ಯಕ್ಷ ಶರಣಬಸಪ್ಪ ಕೆ ದಾನಕೈ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಠದ ಹನುಮಂತಪ್ಪಜ್ಜ ಧರ್ಮರ, ಶರಣಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ವೀರಭದ್ರಪ್ಪ ನಿಡಗುಂದಿ, ಸಂಗಯ್ಯ ಯಾವಗಲ್ಲಮಠ, ಗುರುಮೂರ್ತಿ ಬಡಿಗೇರ, ವೀರಪ್ಪ ರ್ಯಾವಣಕಿ, ಬಸವರಾಜ ಹಳ್ಳಿಕೇರಿ ಹಾಗೂ ಸಂಗೀತ ಬಳಗದ ಕಳಕಪ್ಪ ಹಡಪದ ಹಾಗೂ ಹನುಮೇಶ ಹಡಪದ ಅವರು
ಇದ್ದರು.

ಕಲಾವಿದರಾದ ಕಳಕಪ್ಪ ಹಡಪದ, ಹನುಮೇಶ ಇವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT