ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಆನೆಗೊಂದಿ ರಂಗನಾಥಸ್ವಾಮಿ ಮಹಾರಥೋತ್ಸವ

Last Updated 23 ಏಪ್ರಿಲ್ 2022, 6:40 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗ್ರಾಮದ ರಂಗನಾಥ ಸ್ವಾಮಿ ರಥೋತ್ಸವ ಶನಿವಾರ ಸಂಭ್ರಮದಿಂದ ಜರುಗಿತು.

ವಿಜಯನಗರ ರಾಜವಂಶಸ್ಥ ಶ್ರೀಕೃಷ್ಣದೇವರಾಯರ ನೇತೃತ್ವದಲ್ಲಿ ಪಲ್ಲಕ್ಕಿ ಮೆರವಣಿಗೆಯೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದರು. ರಂಗನಾಥ ಸ್ವಾಮಿ ರಥೋತ್ಸವ ಈ ಭಾಗದಲ್ಲಿ ವಿಶಿಷ್ಟವಾಗಿದ್ದು, ಹತ್ತಾರು ಗ್ರಾಮಗಳ ಜನತೆ ಭಾಗವಹಿಸುತ್ತಾರೆ.

ಬೆಳಿಗ್ಗೆ ಮತ್ತು ಸಂಜೆ ರಥವನ್ನು ಎಳೆಯುವುದು ಇಲ್ಲಿನ ವಿಶೇಷವಾಗಿದೆ. ಬೆಳಿಗ್ಗೆ ರಾಘವೇಂದ್ರ ಸ್ವಾಮಿ ಮಠದವರೆಗೆ ಎಳೆದು ಬಿಡಲಾಗುತ್ತದೆ. ನಂತರ ಸಂಜೆ ಮತ್ತೆ ರಥವನ್ನು ಎಳೆಯುವ ಮೂಲಕ ಸ್ವಸ್ಥಾನದವರೆಗೆ ಎಳೆಯಲಾಗುತ್ತದೆ.

ಬೆಳಿಗ್ಗೆ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ದೇವಾಲಯದ ಅರ್ಚಕರು ವೇದಘೋಷಗಳೊಂದಿಗೆ ಸ್ವಾಮಿಯ ಉತ್ಸವಕ್ಕೆ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT