ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಪವಿಭಾಗ ಆಸ್ಪತ್ರೆ: ಆರೋಗ್ಯ ರಕ್ಷಾ ಸಮಿತಿ ಸದಸ್ಯರ ಪದಗ್ರಹಣ

Published 10 ಜುಲೈ 2024, 14:27 IST
Last Updated 10 ಜುಲೈ 2024, 14:27 IST
ಅಕ್ಷರ ಗಾತ್ರ

ಗಂಗಾವತಿ: ನಗರದ ಉಪವಿಭಾಗ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ರಾಜ್ಯ ಸರ್ಕಾರ ನೇಮಿಸಿದ ನಾಮನಿರ್ದೇಶಿತ ಸದಸ್ಯರ ಪದಗ್ರಹಣ ಸಮಾರಂಭ ಬುಧವಾರ ಉಪವಿಭಾಗ ಆಸ್ಪತ್ರೆ ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮ ಆರಂಭದ ನಂತರ ಆರೋಗ್ಯ ರಕ್ಷಾ ಸಮಿತಿ ನಾಮನಿರ್ದೇಶಿತ ಸದಸ್ಯರಾದ ಲಕ್ಷ್ಮಿ ಕೊತ್ವಾಲ್, ಹೊನ್ನೂರಲಿ, ಸಂತೋಷ ಪಾಟೀಲ್, ಚಂದ್ರಶೇಖರ ಕಲ್ಮನಿ, ಮಲ್ಲಿಕಾರ್ಜುನ ತಟ್ಟಿ, ಶರಣಪ್ಪ, ಉಮಲೂಟಿ ಬಸಪ್ಪ, ಪ್ರಭಾವತಿ ಅವರು ಆದೇಶಪತ್ರ ಹಿಡಿದು ಅಧಿಕಾರ ಸ್ವೀಕರಿಸಿದರು.

ಈ ಸಮಯದಲ್ಲಿ ಆಸ್ಪತ್ರೆ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ನಾಮ ನಿರ್ದೇಶಿತ ಸದಸ್ಯರಿಗೆ ಪದಗ್ರಹಣದ ಶುಭಾಶಯಗಳು ಕೋರಿದರು.

ಉಪವಿಭಾಗ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಈಶ್ವರ ಸವಡಿ ಮಾತನಾಡಿ, ‘ಸರ್ಕಾರಿ ಆಸ್ಪತ್ರೆಯ ಚಿಕಿತ್ಸೆ, ಸೌಲಭ್ಯ ಜನರಿಗೆ ಸುಲಭವಾಗಿ ದೊರಕುವಂತೆ ಮಾಡಲು ಹಾಗೂ ಆಸ್ಪತ್ರೆ ಸಮಸ್ಯೆಗಳು, ಅವಶ್ಯಕತೆಗಳು ಸರ್ಕಾರಕ್ಕೆ ತಿಳಿಸಲು ಪ್ರತಿ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಗೆ ಆರೋಗ್ಯ ರಕ್ಷಾ ಸಮಿತಿ ರಚಿಸಿ, ಅದಕ್ಕೆ ನಾಮನಿರ್ದೇಶಿತ ಸದಸ್ಯರನ್ನು ನೇಮಿಸಿ, ಸರ್ಕಾರ ಆದೇಶ ಹೊರಡಿಸಿದೆ. ನಾಮನಿರ್ದೇಶಿತ ಸದಸ್ಯರು ಆಸ್ಪತ್ರೆ ಕಾರ್ಯವೈಖರಿ, ಚಿಕಿತ್ಸೆ ಎಲ್ಲವನ್ನು ತಿಳಿದು, ಬಡಜನರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಬಗ್ಗೆ ಜಾಗೃತಿ ಮೂಡಿಸಿ, ಇಲ್ಲಿ ಸಿಗುವ ಚಿಕಿತ್ಸಾ ಸೌಲಭ್ಯ ಸಾರ್ವಜನಿಕರಿಗೆ ದೊರೆಯುವಂತೆ ಮಾಡಬೇಕು’ ಎಂದು ಮನವಿ ಮಾಡಿದರು.

ನಗರಸಭೆ ಸದಸ್ಯ ಎಫ್.ರಾಘವೇಂದ್ರ, ಮನೋಹರಸ್ವಾಮಿ ಜಿ.ಪಂ.ಮಾಜಿ ಸದಸ್ಯ ಅಮರೇಶ ಗೋನಾಳ, ಹುಲಿಗೆಮ್ಮ ಕಿರಿಕಿರಿ, ಎಸ್.ಬಿ‌.ಖಾದ್ರಿ, ಹುಸೇನಪೀರ ಜವಳಗೇರಾ, ಕೆ.ಸನ್ನಿಕ್ ಭಾಷಾ, ವಿಶ್ವನಾಥ ಮಾಲಿಪಾಟೀಲ, ಆಸೀಫ್ ಅಹ್ಮದ್, ಉಮರ್ ಹುಸೇನಸಾಬ, ಪರಶುರಾಮ ಕಿರಿಕಿರಿ, ವಿರೂಪಾಕ್ಷಸ್ವಾಮಿ ದಾಸನಾಳ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT