ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಬುರ್ಗಾ: ಹೈನುಗಾರಿಕೆ ಜಾಗೃತಿ ಅಭಿಯಾನ

Published 29 ಮಾರ್ಚ್ 2024, 15:38 IST
Last Updated 29 ಮಾರ್ಚ್ 2024, 15:38 IST
ಅಕ್ಷರ ಗಾತ್ರ

ಯಲಬುರ್ಗಾ: ತಾಲ್ಲೂಕಿನ ತರಲಕಟ್ಟಿ ಗ್ರಾಮದಲ್ಲಿ ಬೈಫ್ ಸಂಸ್ಥೆ ಹಾಗೂ ಸರ್ವೋನ್ನತಿ ಸಂಸ್ಥೆಯ ಸಹಯೋಗದಲ್ಲಿ ಕೃಷಿ ಹಾಗೂ ಹೈನುಗಾರಿಕೆಗೆ ಸಂಬಂಧಿಸಿದಂತೆ ವಿವಿಧ ಯೋಜನೆಗಳ ಕುರಿತ ಜಾಗೃತಿ ಕಾರ್ಯಕ್ರಮ ನಡೆಯಿತು.

ಸರ್ವೋನ್ನತಿ ಸಂಸ್ಥೆಯ ಯೋಜನಾಧಿಕಾರಿ ಗಂಗಾ ಅಂಕದ ಮಾತನಾಡಿ,‘ಗ್ರಾಮೀಣ ಪ್ರದೇಶದ ಅಭಿವೃದ್ಧಿ ಹಾಗೂ ರೈತರ ಸರ್ವಾಂಗೀಣ ಪ್ರಗತಿಗೆ ಶ್ರಮಿಸುತ್ತಿರುವ ಉಭಯ ಸಂಸ್ಥೆಗಳು ರೈತರ ಆರ್ಥಿಕ ಸಬಲರನ್ನಾಗಿ ಮಾಡುತ್ತಿವೆ’ ಎಂದರು.

ಈ ಭಾಗದಲ್ಲಿ ಸಂಸ್ಥೆಯ ವತಿಯಿಂದ 10 ಶಾಲೆಗಳಿಗೆ ಸ್ಮಾರ್ಟ್‌ಬೋರ್ಡ್, ಗ್ರಂಥಾಲಯಗಳಿಗೆ ಪುಸ್ತಕಗಳು, ಪ್ರಯೋಗ ಶಾಲೆಗಳಿಗೆ ಪರಿಕರಗಳು, ಕುಡಿಯುವ ನೀರಿನ ಶುದ್ಧೀಕರಿಸುವ ಪರಿಕರಗಳು ಹೀಗೆ ಮಕ್ಕಳ ಶೈಕ್ಷಣಿಕ ಸುಧಾರಣೆಗೆ ದೇಣಿಗೆ ನೀಡಿದ್ದನ್ನು ಸ್ಮರಿಸಬಹುದಾಗಿದೆ’ ಎಂದರು.

‘ಹುಣಸಿಹಾಳ, ಮುರಡಿ, ನರಸಾಪುರ, ಮಕ್ಕಳ್ಳಿ, ಮಂಡಲಮರಿ, ತರಲಕಟ್ಟಿ, ಗುನ್ನಾಳ, ಕೊಳಿಹಾಳ, ಬೈರನಾಯಕನಹಳ್ಳಿ, ಗುತ್ತೂರ ಸೇರಿ ಇನ್ನಿತರ ಗ್ರಾಮಗಳು ಸಂಸ್ಥೆಯ ವಿವಿಧ ಯೋಜನೆಗಳ ಪ್ರಯೋಜನ ಪಡೆದುಕೊಂಡ ಗ್ರಾಮಗಳಾಗಿವೆ’ ಎಂದು ಹೇಳಿದರು.

ಸರ್ವೋನ್ನತಿ ಸಂಸ್ಥೆಯ ಅಧ್ಯಕ್ಷ ಕೃಷ್ಣರಾವ್ ದೇಶಪಾಂಡೆ, ನಿರ್ದೇಶಕರಾದ ಶರಣಪ್ಪ ಮೇಟಿ, ಶೇಖರಗೌಡ ಕೊಪ್ಪದ, ನಿಂಗರಾಜ ಹೊಸ್ಮನಿ, ಮಾರುತಿ ಹಿರೇಹಳ್ಳಿ, ಶರಣಪ್ಪ ಹಳ್ಳಿ, ರವೀಂದ್ರ ಪತ್ತಾರ, ಸಂಸ್ಥೆಯ ಸುನೀತಾ ಕುಸಗಲ್, ಉಪಯೋಜನಾಧಿಕಾರಿ ಎಂ.ಡಿ.ಹಳ್ಳಿ, ಪಶು ಇಲಾಖೆ ಡಾ.ಪ್ರಕಾಶ ಚೂರಿ, ಸಿಬ್ಬಂದಿ ಹುಸೇನ್ ಪಾಷಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT