ಕುಕನೂರು: 78 ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಯಲಬುರ್ಗಾ ಮಂಡಲ ಬಿಜೆಪಿ ಯುವ ಮೋರ್ಚಾದಿಂದ ಹರ್ ಘರ್ ತಿರಂಗಾ ಅಭಿಯಾನದಡಿ ಪಟ್ಟಣದಲ್ಲಿ ಬೈಕ್ ರ್‍ಯಾಲಿ ಮಾಡಲಾಯಿತು.
ಮಸಬಹಂಚಿನಾಳದ ಬಿಜೆಪಿ ಕಾರ್ಯಾಲಯದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು, ಬೈಕ್ ರ್‍ಯಾಲಿ ಮಾಡುವ ಮೂಲಕ ಮನೆ ಮನೆ ಮೇಲೆ ತ್ರಿವರ್ಣ ಧ್ವಜ ಹಾರಿಸೋಣ ಭಾರತ ಮಾತೆಗೆ ನಮಿಸೋಣ ಎಂದು ಅಭಿಯಾನ ಜರುಗಿತು.
ಬೈಕ್ ರ‍್ಯಾಲಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ್, ಯುವ ಮೋರ್ಚಾದ ತಾಲ್ಲೂಕು ಅಧ್ಯಕ್ಷ ಕಲ್ಲಪ್ಪ ಕರಮುಡಿ, ಪಟ್ಟಣ ಪಂಚಾಯಿತಿ ಸದಸ್ಯರು, ಇತರ ಪದಾಧಿಕಾರಿಗಳು ಸುಮಾರು 50 ರಿಂದ 60 ಬೈಕ್ ಗಳೊಂದಿಗೆ ಭಾಗವಹಿಸಿ ಹರ್ ಘರ್ ತಿರಂಗ ಅಭಿಯಾನ ಕಾರ್ಯಕ್ರಮ ನೆರವೇರಿಸಿದರು.
ರ್‍ಯಾಲಿ ಮುಗಿದ ಮೇಲೆ ವೀರಭದ್ರಪ್ಪ ಸರ್ಕಲ್ ನಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಯುವ ಮೋರ್ಚಾದ ಜಿಲ್ಲಾ ಅಧ್ಯಕ್ಷ ಮೌನೇಶ್ ದಡೇಸಗೂರು ಭಾಗವಹಿಸಿ ಹರ್ ಘರ್ ತಿರಂಗಾ ಅಭಿಯಾನವು ಮನೆ ಮನೆಯಲ್ಲೂ ರಾಷ್ಟ್ರೀಯ ಧ್ವಜ ಹಾರಿಸಬೇಕು. ಈ ಮೂಲಕ ಎಲ್ಲರಲ್ಲಿ ದೇಶ ಭಕ್ತಿ, ದೇಶಪ್ರೇಮ ಮೂಡಲು ಈ ಅಭಿಯಾನ ಮಾಡಲಾಗುತ್ತಿದೆ ಎಂದು ಹೇಳಿದರು.