ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಕ್ಕಿ ಜ್ವರದಿಂದ ಕುಕ್ಕುಟೋದ್ಯಮಕ್ಕೆ ನಷ್ಟ’

Last Updated 6 ಜನವರಿ 2021, 11:26 IST
ಅಕ್ಷರ ಗಾತ್ರ

ಗಂಗಾವತಿ: ‘ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ರಾಜಸ್ತಾನ ಹಾಗೂ ಕೇರಳದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಇದು ಸಾಂಕ್ರಾಮಿಕ ರೋಗ. ಎಲ್ಲ ಹಕ್ಕಿಗಳೂ ಈ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇದೆ. ಕುಕ್ಕುಟೋದ್ಯಮಕ್ಕೆ ನಷ್ಟ ಉಂಟಾಗಲಿದೆ’ ಎಂದು ಕೃಷಿ ವಿಜ್ಞಾನ ಕೆಂದ್ರದ ಮುಖ್ಯಸ್ಥ ಡಾ.ಎಂ.ವಿ.ರವಿ ತಿಳಿಸಿದ್ದಾರೆ.

Avian Influenza ಆಗಿರುವ ಇದು ಸಾಕು ಹಕ್ಕಿಗಳಾದ ಟರ್ಕಿ ಕೋಳಿ, ಗಿನಿ ಕೋಳಿ, ಬಣ್ಣದ ಹಕ್ಕಿ ಮತ್ತು ಬಾತು ಕೋಳಿ, ಪಂಜರದ ಪಕ್ಷಿಗಳಾದ ಮೈನಾ, ಗಿಣಿ, ಕಾಕಟೂಗಳು ಹಾಗೂ ಹೆಬ್ಬಾತು, ಕೆಂಪು ಟರ್ನ್ ಸ್ಟೋನ್, ತಿಮಿಂಗಿಲ, ಹಂದಿ ಹಾಗೂ ಕೋತಿಗಳಲ್ಲ ವ್ಯಾಪಕವಾಗಿ ಹರಡುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಹಕ್ಕಿಗಳಲ್ಲಿ ಜ್ವರದ ಲಕ್ಷಣಗಳು ಕಂಡುಬಂದರೆ ರೈತರು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ರೋಗಗ್ರಸ್ಥ ಹಕ್ಕಿಗಳನ್ನು ಬೇರ್ಪಡಿಸಿ ಕೊಲ್ಲಬೇಕು. ರೋಗದಿಂದ ಸಾವನ್ನಪ್ಪಿದ ಹಕ್ಕಿಗಳನ್ನು ಸುಡಬೇಕು ಅಥವಾ ಹೂಳಬೇಕು. ಇದರೊಟ್ಟಿಗೆ ಹಕ್ಕಿಗಳ ಗೂಡಿನಲ್ಲಿರುವ ಮೊಟ್ಟೆ, ಆಹಾರ, ರೆಕ್ಕೆ ಎಲ್ಲವನ್ನೂ ಸುಡಬೇಕು. ಕೋಳಿ ಮನೆಗಳನ್ನು ಕ್ರಿಮಿನಾಶಕಗಳಿಂದ ಸ್ವಚ್ಛಗೊಳಿಸಬೇಕು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT