ಬುಧವಾರ, ಆಗಸ್ಟ್ 17, 2022
25 °C

ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಸಿದ್ದರಾಮಯ್ಯ ಆದ್ಯತೆ: ಲಕ್ಷ್ಮಣ ಸವದಿ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ‘ರಾಜ್ಯದಲ್ಲಿಯೂ ಲವ್‌ ಜಿಹಾದ್‌ ವಿರುದ್ಧ ಸರ್ಕಾರ ಕಾನೂನು ತರುವ ಯೋಚನೆ ಮಾಡಿದೆ. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ವಿರೋಧ ವ್ಯಕ್ತಪಡಿಸುವ ಮೂಲಕ ಮಹಿಳೆಯರ ರಕ್ಷಣೆಗಿಂತ ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಮುಂದಾಗಿದ್ದಾರೆ’ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಆರೋಪಿಸಿದರು.

‘ಲವ್‌ ಜಿಹಾದ್‌ನಿಂದ ಹಿಂದೂ ಮಹಿಳೆಯರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಇದಕ್ಕೆ ಎಷ್ಟೇ ವಿರೋಧ ಬಂದರೂ ಜಾರಿ ಮಾಡಿಯೇ ಮಾಡುತ್ತೇವೆ’ ಎಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಸಿದ್ದರಾಮಯ್ಯ ಕ್ಷಮೆಯಾಚಿಸಲಿ’

ಕೊಪ್ಪ (ಚಿಕ್ಕಮಗಳೂರು): ‘ಸಿದ್ದರಾಮಯ್ಯ ಅವರಿಗೆ ‘ಕ್ರಾಸ್‌ ಬ್ರೀಡ್‌’ ಬಗ್ಗೆ ಬಹಳ ಆಸಕ್ತಿ. ಅವರ ಹೇಳಿಕೆ ಮೂರ್ಖತನದ್ದು, ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು’ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಆಗ್ರಹಿಸಿದರು.

‘ಇಂದಿರಾ ಗಾಂಧಿ ಯಾರಿಗೋ ಮದುವೆಯಾಗಿದ್ದರು, ಸೋನಿಯಾ ಗಾಂಧಿ ಅವರು ಇನ್ನ್ಯಾರಿಗೋ ಮದುವೆಯಾದರು’ ಎಂದು ಕುಹಕವಾಡಿದರು.

‘ಸಿದ್ದರಾಮಯ್ಯ ಅವರೇ, ಮುಸಲ್ಮಾನರನ್ನು ಓಲೈಸಿದ್ದರಿಂದ ಗೋಹತ್ಯೆ ವಿಚಾರದಲ್ಲಿ ಮಂಗಳೂರಿನಲ್ಲಿ ಅನೇಕ ಹಿಂದೂ ಯುವಕರ ಕಗ್ಗೊಲೆಗಳಾದವು. ಮುಸಲ್ಮಾನರ ಓಲೈಕೆ ಮಾಡಿದರೆ ಹಿಂದೂ ಸಮಾಜ ಇನ್ನಷ್ಟು ಜಾಗೃತವಾಗುತ್ತದೆ ಎಂದು ನೆನಪಿಟ್ಟುಕೊಳ್ಳಬೇಕು’ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು