ಯಲಬುರ್ಗಾ: ಮಹೇಶ ಜೋಶಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಕಾರಣ ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಅವರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ವಿ.ಧರಣಾ ಮಾತನಾಡಿ,‘ಜೋಶಿಯವರ ಗೆಲುವು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಕಸಾಪ ಉತ್ತಮ ಸಂಸ್ಥೆಯಾಗಿ ರೂಪಗೊಳ್ಳಲಿದೆ. ಉತ್ತಮ ಸಂಸ್ಥೆ ಯೋಗ್ಯ ವ್ಯಕ್ತಿಯ ಕೈಗೆ ಸಿಕ್ಕಿದ್ದು ಖುಷಿಗೆ ಕಾರಣವಾಗಿದೆ. ಆದರೆ, ಜಿಲ್ಲೆಯಲ್ಲಿ ವೀರಣ್ಣ ನಿಂಗೋಜಿ ಅವರ ಸೋಲು ಸಾಹಿತ್ಯ ಕ್ಷೇತ್ರಕ್ಕೆ ಆಗಿರುವ ಅನ್ಯಾಯ ಎಂದರೆ ತಪ್ಪಾಗದು’ ಎಂದು ಅಭಿಪ್ರಾಯಪಟ್ಟರು.

ಅನೇಕರು ಮಾತನಾಡಿ,‘ರಾಜ್ಯ ಸಮಿತಿಗೆ ವೀರಣ್ಣ ನಿಂಗೋಜಿಯವರನ್ನು ಪದಾಧಿಕಾರಿಯನ್ನಾಗಿ ಆಯ್ಕೆ ಮಾಡಬೇಕು’ ಎಂದು ಒತ್ತಾಯಿಸಿದರು.

ಕಸಾಪ ಜಿಲ್ಲಾ ಸಮಿತಿಯ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ ಮಾತನಾಡಿ,‘ಬೆಂಬಲಿತ ಅಭ್ಯರ್ಥಿ ಡಾ.ಮಹೇಶ ಜೋಶಿಯವರ ಗೆಲುವಿನ ಸಿಹಿಯು ನನ್ನ ಸೋಲಿನ ಕಹಿಯನ್ನು ಮರೆಯುವಂತೆ ಮಾಡಿದೆ’ ಎಂದರು.

ಸುರೇಶಗೌಡ ಶಿವನಗೌಡ್ರ, ಮಲ್ಲನಗೌಡ ಪಾಟೀಲ, ಹಂಪಯ್ಯ ಹಿರೇಮಠ, ರಸೂಲ್‍ಸಾಬ್ ದಮ್ಮೂರು, ಈಶ್ವರ ಅಟಮಾಳಗಿ ಮಾತನಾಡಿದರು.

ಆರ್.ಜಿ.ನಿಂಗೋಜಿ, ಮಲ್ಲಣ್ಣ ತೆಂಗಿನಕಾಯಿ, ರಾಮಣ್ಣ ಪ್ರಭಣ್ಣನವರ್, ಶರಣಪ್ಪ ರಾಂಪೂರು, ಶಿವು ರಾಜೂರ್, ಬಸವರಾಜ ಗುಳಗುಳಿ, ಕೆ.ಜಿ.ಪಲ್ಲೇದ್, ಪಿ.ಟಿ.ಉಪ್ಪಾರ್, ಯಲ್ಲಪ್ಪ ಹೊಸಮನಿ, ಮಹಾಂತೇಶ, ದಾನನಗೌಡ ತೊಂಡಿಹಾಳ, ಹನುಮಂತಪ್ಪ ದಾನಕೈ, ದೊಡ್ಡಪ್ಪ ಗಾಣಗೇರ, ವೀರನಗೌಡ ಪೊಲೀಸ್ ಪಾಟೀಲ, ಪ್ರಭು ಅಯ್ಯನಗೌಡ್ರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.