ಕೊಪ್ಪಳ: ಉತ್ತಮ ಆರೋಗ್ಯ ಹಾಗೂ ಫಿಟ್ನೆಸ್ಗಾಗಿ ಯೋಗ ಮಾಡಬೇಕೆನ್ನುವ ಆಸೆಯಿದ್ದರೂ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಅನಾನುಕೂಲ ಹಾಗೂ ಸಮಯದ ಅಭಾವ ಇದ್ದವರಿಗೆ ಈಗ ಮನೆಯಿಂದಲೇ ಯೋಗ ಕಲಿತುಕೊಳ್ಳುವ ಹಾಗೂ ನಿತ್ಯ ಆಸನಗಳನ್ನು ಮಾಡಲು ವೇದಿಕೆ ಸಿದ್ಧಗೊಂಡಿದೆ.

ಜೂನ್ 21ರಂದು ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಕೊಪ್ಪಳ ತಾಲ್ಲೂಕಿನ ಕಾಮನೂರಿನ ಆಯುಷ್ ಇಲಾಖೆಯ ಆಯುಷ್ಮಾನ್ ಕೇಂದ್ರ ಮತ್ತು ನಗರದ ಔರಾ ಯೋಗಾ ಕೇಂದ್ರದ ಸಹಯೋಗದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆನ್ಲೈನ್ ಮೂಲಕ ಸಾರ್ವಜನಿಕರಿಗೆ ಯೋಗ ತರಬೇತಿ ಕೊಡಿಸಲು ಮುಂದಾಗಿದೆ.

'ಯೋಗಾ ಚಾಲೆಂಜ್’ ಹೆಸರಿನಲ್ಲಿ 30 ದಿನಗಳ ಕಾಲ ಯೋಗ ಕಲಿಸಲಾಗುತ್ತಿದ್ದು, ಆಸಕ್ತರು ತಮ್ಮ ಮೊಬೈಲ್ ನೋಡಿಕೊಂಡು ಯೋಗಭ್ಯಾಸ ಮಾಡಬಹುದು. ಆಯುಷ್ ಇಲಾಖೆ ನಿಯಮದಂತೆ ನಿತ್ಯ 30 ನಿಮಿಷಗಳ ಸರಳ ಯೋಗ, ವಿಶೇಷ ಯೋಗ ಹಾಗೂ ದಿನಕ್ಕೊಂದು ಆರೋಗ್ಯ ಸಲಹೆ ಲಭಿಸಲಿದೆ. ಎಲ್ಲ ವಯಸ್ಸಿನವರಿಗೂ ಮುಕ್ತ ಅವಕಾಶವಿದೆ. ನಿತ್ಯ ಗೂಗಲ್ ಮೀಟ್ ಮೂಲಕ ಆನ್ಲೈನ್ನಲ್ಲಿ ಯೋಗಭ್ಯಾಸಗಳನ್ನು ಹೇಳಿಕೊಡಲಾಗುತ್ತದೆ.

ಯೋಗದಲ್ಲಿ ಪರಿಣತಿ ಹೊಂದಿರುವ ಅನುಭವಿಗಳು ಆಸನಗಳನ್ನು ಹೇಳಿಕೊಡಲಿದ್ದು, ಹೆಸರು ನೋಂದಾಯಿಸಿದವರಿಗೆ ಲಿಂಕ್ ಶೇರ್ ಮಾಡಲಾಗುತ್ತದೆ. ಈ ಚಾಲೆಂಜ್ನಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸಿಕೊಂಡವರು ತಮ್ಮ ಜಿಮೇಲ್ ಐಡಿ ಹಾಗೂ ಇನ್ನಿತರ ದಾಖಲೆಗಳನ್ನು ಒದಗಿಸಿದರೆ ಅವರ ಮೊಬೈಲ್ನಲ್ಲಿ ಯೋಗಾಸನದ ವಿಡಿಯೊಗಳನ್ನು ನೋಡಿ ಮನೆಯಿಂದಲೇ ಯೋಗಭ್ಯಾಸವನ್ನು ಕಲಿತುಕೊಳ್ಳಲು ಕ್ರೀಡಾ ಇಲಾಖೆ ವ್ಯವಸ್ಥೆ ಮಾಡಿದೆ.

ಜೂನ್ 21 ಅಂತರರಾಷ್ಟ್ರೀಯ ಯೋಗ ದಿನವಾಗಿದ್ದು, ಜಗತ್ತಿನ ಬಹುತೇಕ ದೇಶಗಳು ಇದನ್ನು ಅಂದು ಆಚರಣೆ ಮಾಡುತ್ತಿವೆ. ಅಂದು ದೇಶದಲ್ಲಿಯೂ ವಿವಿಧ ಸಂಘ ಸಂಸ್ಥೆಗಳು ಯೋಗದಿನವನ್ನು ಆಚರಿಸುವ ಮೂಲಕ ಯೋಗದ ಮಹತ್ವವನ್ನು ಹೇಳುವ ಕೆಲಸ ಮಾಡುತ್ತಿವೆ.

‘30 ದಿನಗಳ ಯೋಗ ಶಿಬಿರದಲ್ಲಿ ಸರಳವಾದ ಆಸನಗಳನ್ನು ಹೇಳಿಕೊಡುವುದರಿಂದ ಎಲ್ಲ ವಯಸ್ಸಿನವರೂ ಯೋಗ ಮಾಡಬಹುದು. ಜಿಲ್ಲೆಯ ಎಲ್ಲ ಕಡೆಯೂ ಯೋಗಾಸನಗಳನ್ನು ಕಲಿಸುವ ಕೇಂದ್ರಗಳು ಇಲ್ಲ. ನಗರ ಪ್ರದೇಶದಲ್ಲಿ ಇರುವವರು ತರಬೇತಿ ಕೇಂದ್ರಕ್ಕೆ ಹೋಗುವಷ್ಟು ಪುರುಸೊತ್ತು ಇರುವುದಿಲ್ಲ. ಆದ್ದರಿಂದ ಉಚಿತವಾಗಿಯೇ ಜನ ಮನೆಯಿಂದಲೇ ಯೋಗ ಮಾಡಲು ಅವಕಾಶ ಕಲ್ಪಿಸಲಾಗಿದೆ’ ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ ‘ಪ್ರಜಾವಾಣಿ’ಗೆ ತಿಳಿಸಿದರು.

ಕ್ಯು.ಆರ್. ಕೋಡ್ ಮೂಲಕವೇ ಪ್ರವೇಶಕ್ಕೆ ಅವಕಾಶ ಮೇ 19ರಿಂದ ಯೋಗಾ ಚಾಲೆಂಜ್ ಆರಂಭ ಯೋಗ ದಿನದಂದು ಪ್ರಮಾಣ ಪತ್ರ ವಿತರಣೆ

ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮನೆಯಲ್ಲಿದ್ದುಕೊಂಡೇ ಯೋಗ ಕಲಿಸಲು ವೇದಿಕೆ ಕಲ್ಪಿಸಲಾಗಿದೆ. ಸಾರ್ವಜನಿಕರು ಇದನ್ನು ಹೆಚ್ಚು ಪ್ರಯೋಜನ ಪಡೆದುಕೊಳ್ಳಬೇಕು.
ವಿಠ್ಠಲ ಜಾಬಗೌಡರ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ

ಎಲ್ಲರಿಗೂ ಮೊದಲು ಯೋಗದಲ್ಲಿ ಆಸಕ್ತಿ ಮೂಡಿಸುವುದು ನಮ್ಮ ಉದ್ದೇಶ. ತರಬೇತಿಯ ಸಮಯದಲ್ಲಿ ಸರಳವಾದ ಹಾಗೂ ಆರೋಗ್ಯಕ್ಕೆ ಅನುಕೂಲವಾಗುವ ಆಸನಗಳನ್ನು ಹೇಳಿಕೊಡಲಾಗುತ್ತದೆ.
ರೇಷ್ಮಾ ಬೇಗಂ ವಡ್ಡಟ್ಟಿ ಯೋಗ ಕೋಚ್

ನೋಂದಣಿ ಆರಂಭ ಯೋಗಾ ಚಾಲೆಂಜ್ನಲ್ಲಿ ಪಾಲ್ಗೊಳ್ಳಲು ನೋಂದಣಿ ಆರಂಭವಾಗಿದ್ದು ಆಸಕ್ತರು ಕ್ಯುಆರ್ ಕೋಡ್ ಬಳಸಿಯೂ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕ್ರೀಡಾ ಇಲಾಖೆಯ 08539–230121 9148424598 ಅಥವಾ 7892920462 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.