ಕೊಪ್ಪಳ: ಜಿಲ್ಲೆಯ ಕುಕನೂರು ತಾಲ್ಲೂಕಿನ ಕೋಮಲಾಪುರ ಗ್ರಾಮದಲ್ಲಿ ಮಂಗಳವಾರ ರಾತ್ರಿ
ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಆರು ವರ್ಷದ ಮಗು ಆಹುತಿಯಾಗಿದೆ.

ಹನುಮಪ್ಪ ಅಬ್ಬಿಗೇರಿ ಎಂಬುವವರದ್ದು ಬನಶಂಕರಿ ಕಿರಾಣಿ ಅಂಗಡಿ ಮನೆಯಲ್ಲಿಯೇ ಇದ್ದು, ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಮನೆ ವಸ್ತುಗಳಿಗೆ ತಗುಲಿದೆ. ಮನೆಯಲ್ಲಿದ್ದ ತನ್ನ ಮೂರು ಮಕ್ಕಳನ್ನು ಹನುಮಪ್ಪ ಅಬ್ಬಿಗೇರಿ ರಕ್ಷಿಸಲು ಮುಂದಾಗಿದ್ದು, 8 ವರ್ಷದ ಮಗು ಶಂಕರರಾಜನನ್ನು ಹೊರಕ್ಕೆ ಎತ್ತಿಕೊಂಡು ಬಂದಿದ್ದಾರೆ. 11 ವರ್ಷದ ಮಗು ವಿನೋದ ರಾಜನನ್ನು ಸಹ ಹೊರ ತಂದಿದ್ದಾರೆ. ಈ ಬಾಲಕನಿಗೆ ಸುಟ್ಟು ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಂದು ಮಗು ಎಂಟು ವರ್ಷದ ಜಯರಾಜ ಎಲ್ಲಿದ್ದಾನೆ ಎನ್ನುವುದನ್ನು ಹುಡುಕುವ ವೇಳೆಗೆ ಮನೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಜಯರಾಜ ಬೆಂಕಿಯಲ್ಲಿ ಸುಟ್ಟು ಮೃತಪಟ್ಟಿದ್ದಾನೆ

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ. ಇಒ ರಾಮಣ್ಣ ದೊಡ್ಮನಿ ಹಾಗು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ವರದಿ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.