ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಪು ಘರ್ಷಣೆ: 144 ಸೆಕ್ಷನ್ ಜಾರಿ

Last Updated 17 ಡಿಸೆಂಬರ್ 2021, 5:46 IST
ಅಕ್ಷರ ಗಾತ್ರ

ಗಂಗಾವತಿ: ತಾಲ್ಲೂಕಿನ ಇಸ್ಲಾಂಪುರ ಸರ್ಕಲ್ ಬಳಿ ಬಿಪಿನ್‌ ರಾವತ್ ಸರ್ಕಲ್ ರಚನೆಗೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದ್ದು, ಇದೀಗ ಮುನ್ನೆಚ್ಚರಿಕೆ ಕ್ರಮವಾಗಿ ತಹಶೀಲ್ದಾರ್ ಯು.ನಾಗರಾಜ 4 ದಿನಗಳ ಕಾಲ ನಿಷೇದಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.

ಇಸ್ಲಾಂಪುರ ಸರ್ಕಲ್ ಬಳಿ, ಬಿಜೆಪಿ ಕಾರ್ಯಕರ್ತರು ಗುರುವಾರ ಜನರಲ್ ಬಿಪಿನ್ ರಾವತ್ ಅವರ ವೃತ್ತ ರಚಿಸಿ, ನಾಮಫಲಕ ಅಳವಡಿಸಿದ್ದಾರೆ. ಈ ವಿಷಯದ ಕುರಿತು ಕೆಲ ಮುಸ್ಲಿಂ ಸಮುದಾಯದವರು ವಿರೋಧ ವ್ಯಕ್ತಪಡಿಸಿ, ವಾಗ್ವಾದ ನಡೆಸಿದ್ದಾರೆ.

ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಹಶೀಲ್ದಾರ್, ಇಸ್ಲಾಂಪುರ ಸರ್ಕಲ್ ಸುತ್ತಮುತ್ತ 200
ಮೀಟರ್ ಪ್ರದೇಶದಲ್ಲಿ ಜಗಳ ನಡೆಯದಂತೆ ಡಿ.19 ರಾತ್ರಿ 12 ಗಂಟೆಯವರೆಗೆ 144 ಸೆಕ್ಷನ್ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT