ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ ಅಭ್ಯರ್ಥಿ ಹಿಟ್ನಾಳ ಆಸ್ತಿ ಐದು ವರ್ಷದಲ್ಲಿ ₹5 ಕೋಟಿ ಹೆಚ್ಚಳ

Published 12 ಏಪ್ರಿಲ್ 2024, 13:56 IST
Last Updated 12 ಏಪ್ರಿಲ್ 2024, 13:56 IST
ಅಕ್ಷರ ಗಾತ್ರ

ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಒಟ್ಟು ₹14.86 ಕೋಟಿ ಆಸ್ತಿ ಹೊಂದಿದ್ದು, ಐದು ವರ್ಷಗಳ ಅವಧಿಯಲ್ಲಿ ₹5 ಕೋಟಿ ಆಸ್ತಿ ಹೆಚ್ಚಾಗಿದೆ.

2019ರಲ್ಲಿ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ಸಲ್ಲಿಸಿದ ಅಫಿಡವಿಟ್‌ನಲ್ಲಿ ₹8.47 ಕೋಟಿ ಆಸ್ತಿ ಘೋಷಣೆ ಮಾಡಿದ್ದರು. ವಿವಿಧ ಉದ್ಯಮಗಳನ್ನು ಹೊಂದಿರುವ ಅವರ ಬಳಿ ಪ್ರಸ್ತುತ ₹14.17 ಕೋಟಿ ಚರಾಸ್ತಿ, ₹69.18 ಲಕ್ಷ ಸ್ಥಿರಾಸ್ತಿಯಿದೆ ಎಂದು ಘೋಷಿಸಿಕೊಂಡಿದ್ದಾರೆ.

ರಾಜಶೇಖರ ಹಾಗೂ ಅವರ ಪತ್ನಿ ರಶ್ಮಿ ಹೆಸರಿನಲ್ಲಿ ಎರಡು ಕನ್‌ಸ್ಟ್ರಕ್ಷನ್‌ ಕಂಪನಿಗಳು, ಸ್ಟೋನ್‌ ಕ್ರಷರ್‌ಗಳು, 1075 ಗ್ರಾಂ ಚಿನ್ನ, 2.50 ಕೆ.ಜಿ. ಬೆಳ್ಳಿ ಆಭರಣಗಳು ಇವೆ. ಹಿಟ್ನಾಳ ಹೆಸರಿನಲ್ಲಿ ಲೋಡರ್,​ ನಾಲ್ಕು ಕಾರುಗಳು, 11 ಟಿಪ್ಪರ್​, ಎರಡು ಲೋಡರ್​, ಹಿಟಾಚಿಗಳಿವೆ. ರಶ್ಮಿ ಹೆಸರಿನಲ್ಲಿ ₹1.36 ಕೋಟಿ ಚರಾಸ್ತಿ ಮತ್ತು ₹3.86 ಕೋಟಿ ಸ್ಥಿರಾಸ್ತಿ ಸೇರಿ ₹5.22 ಕೋಟಿ ಆಸ್ತಿ ಹೊಂದಿದ್ದಾರೆ ಎಂದು ಹೇಳಲಾಗಿದೆ.

ಹಿಟ್ನಾಳ ₹10.88 ಕೋಟಿ ಸಾಲ, ಪತ್ನಿ ಹೆಸರಿನಲ್ಲಿ ₹1.73 ಕೋಟಿ ಸಾಲ ಹೊಂದಿದ್ದಾರೆ. ಗಣಿ ನಿಯಮ ಉಲ್ಲಂಘನೆ ಸಂಬಂಧ ಹಿಟ್ನಾಳ ವಿರುದ್ಧ ಪ್ರಕರಣ ದಾಖಲಾಗಿದ್ದು ವಿಚಾರಣಾ ಹಂತದಲ್ಲಿದೆ. ಅವರು ಸಾಂಕೇತಿಕವಾಗಿ ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. 16ರಂದು ನಗರದಲ್ಲಿ ಬೃಹತ್‌ ಮೆರವಣಿಗೆ ನಡೆಸಿ ಮತ್ತೊಂದು ಸಲ ಉಮೇದುವಾರಿಕೆ ಸಲ್ಲಿಸುವರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT