ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟಣದ ಅಭಿವೃದ್ಧಿಗೆ ಸಹಕಾರ ಅಗತ್ಯ: ಪಟ್ಟಣ ಪಂಚಾಯಿತಿ ಅಧ್ಯಕ್ಷ ಶಂಭು ಜೋಳದ

Last Updated 8 ಜೂನ್ 2021, 5:47 IST
ಅಕ್ಷರ ಗಾತ್ರ

ಕುಕನೂರು: ‘ಪಟ್ಟಣದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ’ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಶಂಭು ಜೋಳದ ಅಭಿಪ್ರಾಯಪಟ್ಟರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದರು.

ನನ್ನ ಅವಧಿಯಲ್ಲಿ ಬಸ್ ನಿಲ್ದಾಣದ ಮುಂದುಗಡೆ ಇರುವ ಜಾಗವನ್ನು ಪಟ್ಟಣ ಪಂಚಾಯಿತಿಗೆ ತೆಗೆದುಕೊಂಡು ಆ ಸ್ಥಳದಲ್ಲಿ ₹ 4 ಕೋಟಿ ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

ಗುದ್ನೇಪ್ಪನಮಠ ರಸ್ತೆ ಅಗಲೀಕರಣ, ರಾಜ್ಯದಲ್ಲಿಯೇ ಪ್ರಥಮವಾಗಿ ಶಾಸಕರ ಸಹಕಾರದಿಂದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ₹ 12 ಕೋಟಿ ವೆಚ್ಚದಲ್ಲಿ ಭೂಮಿ ಖರೀದಿಸಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದರು.

10ನೇ ವಾರ್ಡ್‍ನಲ್ಲಿ ಮಹಿಳಾ ಶೌಚಾಲಯ ಹಳೆಯದಾಗಿತ್ತು. ಆದ್ದರಿಂದ ಶಾಸಕ ಹಾಲಪ್ಪ ಆಚಾರ ಅವರು ಡಿಎಂಎಫ್ ಅನುದಾನದಲ್ಲಿ ₹ 10 ಲಕ್ಷ ಅನುದಾನ ಮಂಜೂರು ಮಾಡಿದ್ದಾರೆ. ಆದಷ್ಟು ಬೇಗ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡುವ ಹಣ್ಣು, ಹೂ ಮತ್ತು ಚಿಕನ್, ಮಟನ್ ವ್ಯಾಪಾರಿಗಳಿಗೆ ಬೇರೆ ಸ್ಥಳ ಕಲ್ಪಿಸಿ ಅನುಕೂಲ ಮಾಡಿಕೊಡಲಾಗುವುದು ಎಂದರು.

ಪಟ್ಟಣದ ಸರ್ಕಾರಿ ಆಸ್ತಿಯನ್ನು ಉಳಿಸಿಕೊಂಡು ಅದರಿಂದ ಪಂಚಾಯಿತಿಗೆ ಆದಾಯ ಬರುವಂತೆ ಮಾಡಬೇಕು. ಅಂದಾಗ ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಾಗುತ್ತದೆ. ಪಟ್ಟಣದ ಅಭಿವೃದ್ಧಿಗೆ ಸದಸ್ಯರ ಹಾಗೂ ಸಾರ್ವಜನಿಕರ ಸಹಾಯ, ಸಹಕಾರ ಮುಖ್ಯ ಎಂದು ಹೇಳಿದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟ ಮಾತನಾಡಿ,‘ಪಟ್ಟಣ
ದಲ್ಲಿ ಗುದ್ನೇಪ್ಪನಮಠದ ರಸ್ತೆ ಅಗಲೀಕರಣದಿಂದ ಕೆಲವರಿಗೆ ತೊಂದರೆಯಾಗುತ್ತಿದೆ. ಆದರೆ ಮುಂದೆ ಎಲ್ಲರೂ ಸ್ಮರಿಸುವಂಥ ರಸ್ತೆ ನಿರ್ಮಾಣವಾಗಲಿದೆ. 10ನೇ ವಾರ್ಡ್‌ನ ಮಹಿಳೆಯರಿಗೆ ಬಸ್ ನಿಲ್ದಾಣದಲ್ಲಿ ಶೌಚಾಲಯ ನಿ‌ರ್ಮಾಣಕ್ಕೆ ಕೆಎಸ್‍ಆರ್‌ಟಿಸಿಗೆ ಪತ್ರ ಬರೆಯಲಾಗುವುದು. 20 ವರ್ಷಗಳಿಂದ ಇರುವ ಪಟ್ಟಣ ಪಂಚಾಯತಿ ಮಳಿಗೆಯನ್ನು ರೀ ಟೆಂಡರ್ ಕರೆದು ಬಾಡಿಗೆ ನೀಡಲಾಗುವುದು ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಗೀತಾ ಜಂಗ್ಲಿ, ಹನುಮಯ್ಯ ಹಂಪನಾಳ, ಮೃತ್ಯುಂಜಯ್ಯ ಕಂಪ್ಲಿ, ರತ್ನವ್ವ ಪಲ್ಲೇದ್, ಬಸವರಾಜ ಅಡವಿ, ಕನಕಪ್ಪ ಬ್ಯಾಡರ್, ಮಹೇಶ ಕವಲೂರು, ರಹೇಮಾನಸಾಬ ಮಕ್ಕಪ್ಪನವರ್, ಸಿರಾಜ್ ಕರಮುಡಿ, ಪದ್ಮಾ ದೇಸಾಯಿ, ಸಿದ್ದಲಿಂಗಯ್ಯ ಉಳ್ಳಾಗಡ್ಡಿ, ಬಿ.ಆರ್ ತಾಸೀನ್, ಖಾಜಾ ಪಾಷಾ ಹಾಗೂ ಎಂಜಿನಿಯರ್ ಶಿಲ್ಪಾ ಸೇರಿ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT