ಮುನಿರಾಬಾದ್: ಇಲ್ಲಿನ ತೋಟಗಾರಿಕೆ ಮಹಾವಿದ್ಯಾಲಯ ಡೀನ್ ಡಾ.ಪಿ.ಎಂ.ಗಂಗಾಧರಪ್ಪ ಸೇರಿದಂತೆ ಕಾಲೇಜು ಕ್ಯಾಂಪಸ್ನ 12 ಜನರಿಗೆ ಕೋವಿಡ್ ದೃಢಪಟ್ಟಿದ್ದು, ಗುರುವಾರ ಸಹಾಯಕ ಪ್ರಾಧ್ಯಾಪಕರೊಬ್ಬರು ಕೋವಿಡ್ನಿಂದ ಮೃತಪಟ್ಟಿದ್ದಾರೆ.

ಕಳೆದ ಎರಡು ವಾರದಿಂದ ಕ್ಯಾಂಪಸ್ನಲ್ಲಿ ಕೋವಿಡ್ನದೇ ಸುದ್ದಿಯಾಗಿದೆ. ಕಾಲೇಜು ಡೀನ್ ಡಾ.ಪಿ.ಎಂ.ಗಂಗಾಧರಪ್ಪ ಮತ್ತು ಅವರ ಪತ್ನಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಂಜಿನಿಯರ್ ಮತ್ತು ದಿನಗೂಲಿ ಕಾರ್ಮಿಕರು, ಬೋಧಕೇತರ ಸಿಬ್ಬಂದಿ ಸೇರಿದಂತೆ ಕಾಲೇಜು ಕ್ಯಾಂಪಸ್ಸಿನ 12 ಜನರಿಗೆ ಕೋವಿಡ್ ದೃಢಪಟ್ಟಿದೆ. ಗುರುವಾರ ಸಹಾಯಕ ಪ್ರಾಧ್ಯಾಪಕ ಡಾ.ಎನ್. ಜಗದೀಶ್(42) ಕೋವಿಡ್ನಿಂದ ಮೃತಪಟ್ಟಿದ್ದಾರೆ. ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

ಡಾ.ಎನ್.ಜಗದೀಶ್ ಅವರ ಮೃತದೇಹವನ್ನು ಹೊಸದುರ್ಗ ತಾಲ್ಲೂಕಿನ ಅವರ ಸ್ವಂತ ಗ್ರಾಮ ಶ್ರೀರಾಮಪುರಕ್ಕೆ ಕುಟುಂಬದ ಸದಸ್ಯರು ತೆಗೆದುಕೊಂಡು ಹೋದರು ಎಂದು ಗೊತ್ತಾಗಿದೆ. ಅವರ ಪತ್ನಿ, ಪುತ್ರಿ ಕೂಡ ಕೋವಿಡ್ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.