ಶನಿವಾರ, ಜನವರಿ 23, 2021
28 °C
ಜಿಲ್ಲೆಯ 69 ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲು ಸಿದ್ಧತೆ: ವೈದ್ಯರ ತಂಡದಿಂದ ನಿಗಾ

ಗಂಗಾವತಿ: ಕೊರೊನಾ ಲಸಿಕೆ ಅಣಕು ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ನಗರದ ಆನೆಗೊಂದಿ ರಸ್ತೆಯಲ್ಲಿರುವ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಶುಕ್ರವಾರ ಕೋವಿಡ್‌ ಲಸಿಕೆ ಹಾಕುವ ಪ್ರಯೋಗದ (ಡ್ರೈ ರನ್‌) ಅಣಕು ಪ್ರದರ್ಶನ ನಡೆಯಿತು.

ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಮಹೇಶ ಎಂ.ಜಿ ಮಾತನಾಡಿ,‘ಜಿಲ್ಲೆಯ 69 ಆರೋಗ್ಯ ಕೇಂದ್ರಗಳಲ್ಲಿ ಕೊರೊನಾ ಲಸಿಕೆ ನೀಡಲು ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ. ಮೊದಲ ಬಾರಿಗೆ 10,100 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ. ಈ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ’ ಎಂದು ತಿಳಿಸಿದರು.

‘ಲಸಿಕೆ ಹಾಕಿಸಿಕೊಳ್ಳಲು ಬರುವವರನ್ನು ತಪಾಸಣೆ ನಡೆಸಲಾಗುತ್ತದೆ. ಲಸಿಕೆಯ ಅಡ್ಡ ಪರಿಣಾಮಗಳ ಕುರಿತು ನಿಗಾವಹಿಸಲು ಆಸ್ಪತ್ರೆಯಲ್ಲಿ ಪ್ರತ್ಯೇಕ ವೈದ್ಯರ ತಂಡ ನಿಯೋಜನೆ ಮಾಡಲಾಗುವುದು’ ಎಂದರು.

ಸರ್ಕಾರಿ ಉಪವಿಭಾಗ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಈಶ್ವರ ಸವಡಿ ಮಾತನಾಡಿ,‘ಅಣಕು ಪ್ರದರ್ಶನಕ್ಕೆ 25 ಜನ ನೋಂದಣಿ ಮಾಡಿಸಿಕೊಂಡಿದ್ದಾರೆ. ಅವರಿಗೆ ಲಸಿಕೆ ನೀಡುವ ಮೂಲಕ ಅಣಕು ಪ್ರದರ್ಶನ ನಡೆಸಲಾಗುತ್ತಿದೆ. ಲಸಿಕೆ ಉಂಟು ಮಾಡುವ ತೊಂದರೆಗಳನ್ನು ಸರಿಪಡಿಸಲು ಇದು ಸಹಕಾರಿಯಾಗುತ್ತದೆ. ಲಸಿಕೆ ಹಾಕಿದ ಮೇಲೆ ಲಸಿಕೆ ಹಾಕಿಸಿಕೊಂಡವರನ್ನು ಅರ್ಧಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಇರಿಸಿಕೊಂಡು ನಿಗಾವಹಿಸಲಾಗುತ್ತದೆ. ಅವರಿಗೆ ತೊಂದರೆ ಕಾಣಿಸದೆ ಇದ್ದರೆ ಮನೆಗೆ ಕಳುಹಿಸಲಾಗುವುದು’ ಎಂದು ಹೇಳಿದರು.

ವೈದ್ಯರಾದ ಡಾ.ವಾದಿರಾಜ, ಶಿಲ್ಪಾ ನಾಯಕ, ಆರೋಗ್ಯ ಸಿಬ್ಬಂದಿ ಆಶಾಬೇಗಂ, ಜಯಶ್ರೀ, ರೇಣುಕಾ, ನಾಗಮ್ಮ, ಜ್ಯೋತಿ, ಲಕ್ಷ್ಮೀ, ಸುವರ್ಣಾ, ವಲಿಬಾಷಾ, ಮಲ್ಲಿಕಾರ್ಜುನ, ಅಕ್ಬರ್‌, ಮುದಿಯಪ್ಪ, ಹುಸೇನಬಾಷಾ, ಕಿರಣ, ಸುರೇಶ ಹಾಗೂ ದೇವೇಂದ್ರಗೌಡ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.