ಶುಕ್ರವಾರ, ಮಾರ್ಚ್ 31, 2023
32 °C

‘ಕೋವಿಡ್‌ಗೆ ಲಸಿಕೆ ರಾಮಬಾಣ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ‘ಕೊರೊನಾ ಸೋಂಕಿಗೆ ಲಸಿಕೆಯೇ ಪರಿಹಾರ. ನಾವೆಲ್ಲ ಆರೋಗ್ಯವಾಗಿದ್ದರೆ ಸಕಲವೂ ಕ್ಷೇಮವಾಗಿರುತ್ತದೆ’ ಎಂದು ಪ್ರಾಚಾರ್ಯೆ ಲಲಿತಾ ಬಾವಿಕಟ್ಟಿ ಹೇಳಿದರು.

ನಗರದ ಎಚ್.ಆರ್.ಶ್ರೀರಾಮುಲು ಕಾಲೇಜಿನಲ್ಲಿ ಕೋವಿಡ್ ಲಸಿಕಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು. 

ನಮ್ಮ ಆರೋಗ್ಯ ರಕ್ಷಣೆ ನಮ್ಮ ಕೈಯಲ್ಲಿ ಇದೆ. ಸರ್ಕಾರದ ಆದೇಶದಂತೆ ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೊರೊನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯ ಪ್ರಶಂಸನೀಯ ಎಂದರು.

ಕೊರೊನಾ ತಡೆಗಟ್ಟಲು ಅವರಿಗೆ ಸಹಕರಿಸುವುದರ ಮೂಲಕ ನಾವೆಲ್ಲ ಸದೃಢ ರಾಷ್ಟ್ರದ ನಿರ್ಮಾಣದಲ್ಲಿ ತೊಡಗಿಸಿಕೊಳ್ಳೋಣ ಎಂದರು.

ಆರೋಗ್ಯಾಧಿಕಾರಿ ಡಾ.ರಮೇಶ ದರೋಜಿ ಮತ್ತು ಆರೋಗ್ಯ ಸಹಾಯಕಿಯರಾದ ಸರಸ್ವತಿ, ಹನುಂತಮ್ಮ ಅವರನ್ನು ಕಾಲೇಜಿನ ವತಿಯಿಂದ ಪ್ರಾಚಾರ್ಯರು ಸನ್ಮಾನಿಸಿದರು. ಡಾ.ವಿಜಯಾನಂದ ವಗ್ಗೆ, ವಿರುಪಾಕ್ಷಪ್ಪ ಕಲಕೇರಿ, ಇಂದಿರಾ,ವಿನಯ್, ಹನುಮಂತಪ್ಪ, ರಮೇಶ ಪೂಜಾರ, ದೊಡ್ಡಬಸಮ್ಮ, ಸಾಯಿಕುಮಾರ ಹಾಗೂ ವಿನಾಯಕ ಇದ್ದರು.

ಗುಂಡೂರು ಪವನ್ ಕುಮಾರ್ ಅವರು ಸ್ವಾಗತಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.