ಅಳವಂಡಿ: ‘ಮನುಷ್ಯನ ಉತ್ತಮ ಆರೋಗ್ಯಕ್ಕೆ ಕ್ರೀಡೆ ಅತ್ಯಂತ ಅವಶ್ಯಕವಾಗಿದೆ. ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಆರೋಗ್ಯವಂತ ಮನಸ್ಸು ನಿರ್ಮಾಣವಾಗುತ್ತದೆ’ ಎಂದು ಮುಖಂಡ ಅಜಯಗೌಡ ಪಾಟೀಲ ಮೈನಹಳ್ಳಿ ಹೇಳಿದರು.

ಗ್ರಾಮದ ಸಿದ್ದೇಶ್ವರ ಪಿಯು ಕಾಲೇಜಿನಲ್ಲಿ ಆವರಣದಲ್ಲಿ ಮಾಸ್ಟರ್ ಕ್ರಿಕೆಟ್ ಕ್ಲಬ್ ವತಿಯಿಂದ ನಡೆದ ಅಳವಂಡಿ ಪ್ರೀಮಿಯರ್ ಲೀಗ್ ಸೀಸನ್–5 ಕ್ರಿಕೆಟ್ ಟೂರ್ನಿಯಲ್ಲಿ ಗೆದ್ದ ತಂಡಗಳ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿ,‘ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು’ ಎಂದರು.

ಮುಖಂಡ ಗಣೇಶ ಹೊರತಟ್ನಾಳ ಮಾತನಾಡಿ,‘ಯುವಕರು ಹೆಚ್ಚು ಮೊಬೈಲ್ ಬಳಕೆ ಮಾಡಬಾರದು ಮತ್ತು ದುಶ್ಚಟಗಳಿಂದ ದೂರವಿರಬೇಕು. ಕ್ರೀಡಾಕೂಟಗಳಿಂದ ಯುವಕರಲ್ಲಿ ಶಾಂತಿ, ಸೌಹಾರ್ದ, ಸ್ನೇಹ ಬೆಳೆಯುತ್ತದೆ. ಹಾಗಾಗಿ ಹೆಚ್ಚೆಚ್ಚು ಕ್ರೀಡೆಗಳನ್ನು ಆಯೋಜನೆ ಮಾಡಬೇಕು’ ಎಂದು ಹೇಳಿದರು.

ಟೂರ್ನಿಯಲ್ಲಿ ವಿಕ್ಟರಿ ವೈಪರ್ಸ್ ತಂಡ ಮೊದಲ ಸ್ಥಾನ ಪಡೆದು ₹50,000 ಹಾಗೂ ಟ್ರೋಫಿ, ಡೆವಿಲ್ ಕಿಂಗ್ಸ್ ತಂಡ ದ್ವಿತೀಯ ಸ್ಥಾನ ಪಡೆದು ₹30,000 ಹಾಗೂ ಟ್ರೋಫಿ, ಕರ್ನಾಟಕ ಬುಲ್ಡೋಜರ್ಸ್ ತಂಡ ತೃತೀಯ ಸ್ಥಾನ ಪಡೆದು ₹20,000 ಹಾಗೂ ಟ್ರೋಫಿ ಪಡೆಯಿತು. ಉತ್ತಮ ಬ್ಯಾಟ್ಸ್ಮನ್ ಹಾಗೂ ಉತ್ತಮ ಬೌಲರ್ಗಳಿಗೆ ಬಹುಮಾನ ವಿತರಿಸಲಾಯಿತು.

ಮುಖಂಡರಾದ ಪ್ರಕಾಶಸ್ವಾಮಿ ಇನಾಮದಾರ, ಅನ್ವರ್ ಗಡಾದ, ಗುರು ಬಸವರಾಜ ಹಳ್ಳಿಕೇರಿ, ಶ್ರೀನಿವಾಸ ಕಲಾದಗಿ, ಚನ್ನಪ್ಪ ಮುತ್ತಾಳ, ಪರಪ್ಪ, ಸತೀಶ ಜಾಣಗಾರ, ವೆಂಕಟೇಶ, ರೇಣುಕಪ್ಪ, ತೋಟಯ್ಯ, ಹನುಮಂತ ಮೋರನಾಳ, ಆನಂದ, ಷಣ್ಮುಖರಡ್ಡಿ, ಈಶಪ್ಫ, ನೀಲಪ್ಪ, ರಮೇಶ, ಮೈಲಾರಪ್ಪ, ದಾದು, ನಜೀರ್, ಅಣ್ಣಪ್ಪ, ಮಂಜಪ್ಪ, ವಿರೂಪಾಕ್ಷಿ ಹಾಗೂ ಕ್ರೀಡಾಪಟುಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.