ಕುಕನೂರು: ಅಕಾಲಿಕ ಮಳೆಯಿಂದ ಮನೆ ಹಾಗೂ ಬೆಳೆಹಾನಿ ಉಂಟಾದ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರ ಜಮೀನುಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲ್ಲೂಕಿನ ಯರೇಹಂಚಿನಾಳ, ಬಿನ್ನಾಳ, ಚಿಕೇನಕೊಪ್ಪ, ಭಟಪನಹಳ್ಳಿ ಗ್ರಾಮಗಳಲ್ಲಿ ಮಳೆಗೆ ಕುಸಿದ ಮನೆಗಳಿಗೆ ಮತ್ತು ರೈತರ ಜಮೀನಿಗೆ ಭೇಟಿ ನೀಡಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಅವರು,‘ಅಕಾಲಿಕ ಮಳೆಯಿಂದ ದ್ರಾಕ್ಷಿ, ಮೆಕ್ಕೆಜೋಳ, ತೊಗರಿ, ಈರುಳ್ಳಿ ಸೇರಿದಂತೆ ಇನ್ನಿತರ ಬೆಳೆಗಳು ಹಾನಿಯಾಗಿ ರೈತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಖುದ್ದಾಗಿ ಮನೆ, ಬೆಳೆನಷ್ಟ ಅನುಭವಿಸಿದ ರೈತರ ಜಮೀನುಗಳಿಗೆ ಭೇಟಿ ನೀಡಿ ವೈಜ್ಞಾನಿಕ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ’ ಎಂದು ಹೇಳಿದರು.

ರೈತರಿಂದ ದೂರು ಬಂದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ರೈತರು ಆತಂಕಕ್ಕೆ ಒಳಗಾಗಬಾರದು. ಎನ್ಡಿಆರ್ಎಫ್, ಎಸ್ಡಿಆರ್ಎಫ್ ಮಾರ್ಗಸೂಚಿ ಪ್ರಕಾರ ಪರಿಹಾರ ವಿತರಣೆ ಮಾಡಲು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಲಾ ಗುವುದು. ಯುದ್ಧೋಪಾದಿಯಲ್ಲಿ ಪರಿಹಾರ ಕೊಡಿಸುವ ಕೆಲಸ ಮಾಡಲಾಗುವುದು ಎಂದರು.

ಬೆಳೆಹಾನಿ ವಿವರ: ತಾಲ್ಲೂಕಿನಲ್ಲಿ ಒಟ್ಟು 7 ಹೆಕ್ಟೇರ್ ದ್ರಾಕ್ಷಿ, 893 ಹೆಕ್ಟೇರ್ ಈರುಳ್ಳಿ, ಮೆಣಸಿನಕಾಯಿ, ಕೃಷಿ ಬೆಳೆಯಾದ ತೊಗರಿ, ಸೂರ್ಯಕಾಂತಿ, ಶೇಂಗಾ, ಮೆಕ್ಕೆಜೋಳ ಬೆಳೆಗಳಿಗೆ ಹಾನಿಯಾಗಿದೆ. ತೋಟಗಾರಿಕೆ, ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ಕೈಗೊಂಡು ವರದಿ ತಯಾರಿಸಿ ಸರ್ಕಾರಕ್ಕೆ ತ್ವರಿತವಾಗಿ ಸಲ್ಲಿಸಲಾಗುವುದು ಎಂದು ತಹಶೀಲ್ದಾರ್ ಕಿರಣ್ ಕುಮಾರ್ ಕುಲಕರ್ಣಿ ತಿಳಿಸಿದರು.

ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಲಿಂಗಣ್ಣವರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ ಬಿರಾದಾರ, ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಹಾನಿಮನಿ, ಪಿಎಸ್ಐ ವೆಂಕಟೇಶ.ಎನ್, ಶಂಭು ಜೋಳದ, ಬಸನಗೌಡ ತೊಂಡಿಹಾಳ, ಕಳಕಪ್ಪ ಕಂಬಳಿ, ವೀರಣ್ಣ ಹುಬ್ಬಳ್ಳಿ ಹಾಗೂ ಶಿವಕುಮಾರ ನಾಗಲಾಪುರಮಠ ಇದ್ದರು.

‘ಬೆಳೆಹಾನಿ: ಸೂಕ್ತ ಪರಿಹಾರ ನೀಡಿ’

ಯಲಬುರ್ಗಾ: ‘ಸತತ ಮಳೆಯಿಂದ ಕಟಾವಿಗೆ ಬಂದಿದ್ದ ತೊಗರಿ ಬೆಳೆ ನಾಶವಾಗಿದ್ದು, ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು’ ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲನಗೌಡ ಕೋನನಗೌಡ ಒತ್ತಾಯಿಸಿದ್ದಾರೆ.

ತಮ್ಮ ಬೆಂಬಲಿಗರೊಂದಿಗೆ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಮಾತನಾಡಿದ ಅವರು,‘ವಿಪರೀತ ತೇವಾಂಶದಿಂದ ಬೆಳೆಹಾಳಾಗಿದೆ. ಅಲ್ಲದೆ, ಹೂ ಉದುರಿದೆ. ಇದರಿಂದ ಕಾಪು ನಾಶವಾಗಿ ಇಳುವರಿ ಬರದ ಸ್ಥಿತಿಯಲ್ಲಿದೆ. ಕೆಲವೊಂದು ಕಡೆ ತೊಗರಿ ಬುಡ್ಡಿ ಕೊಳೆಯುತ್ತಿವೆ’ ಎಂದರು.

ತಾಲ್ಲೂಕಿನ ವಿವಿಧ ಹೋಬಳಿಗಳಲ್ಲಿ ಸುಮಾರು ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು ಕಂಡುಬಂದಿದೆ. ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ಚುನಾವಣಾ ನೀತಿ ಸಂಹಿತೆಯ ನೆಪ ಹೇಳದೇ ಹಳ್ಳಿ ಹಳ್ಳಿಗೆ ಭೇಟಿ ನೀಡಬೇಕು. ನಷ್ಟವಾಗಿರುವ ಕುರಿತು ಸರಿಯಾಗಿ ಲೆಕ್ಕಾಚಾರ ಮಾಡಿ ಸರ್ಕಾರಕ್ಕೆ ವರದಿ ಒಪ್ಪಿಸದೇ ಪ್ರಾಮಾಣಿಕವಾಗಿ ಪಾರದರ್ಶಕವಾಗಿ ವರದಿ ಸಲ್ಲಿಸಿ ನಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮುಖಂಡ ಶರಣಪ್ಪ ರಾಂಪೂರ ಮಾತನಾಡಿ,‘ಜಿಲ್ಲಾ ಉಸ್ತುವಾರಿ ಸಚಿವರ ಜತೆ ಜಿಲ್ಲಾ ಮಟ್ಟದ ಅಧಿಕಾರಿಗಳು ವಾಹನದಲ್ಲಿ ಸುತ್ತಾಡಿದರೆ ಅದು ಕಾಟಾಚಾರಕ್ಕೆ ಸಮೀಕ್ಷೆಯಾಗುತ್ತದೆ. ಅಧಿಕಾರಿಗಳು ರೈತರ ಕಷ್ಟ–ನಷ್ಟಗಳನ್ನು ಅರಿತು ಪರಿಣಾಮಕಾರಿ ಸಮೀಕ್ಷೆ ನಡೆಸಿ ಹೆಚ್ಚಿನ ಪರಿಹಾರ ಸಿಗುವಂತೆ ಮಾಡಲು ವಿಶೇಷ ಕಾಳಜಿ ವಹಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಪಕ್ಷದ ಉಪಾಧ್ಯಕ್ಷ ಹನಮಗೌಡ ಮಾಲಿಪಾಟೀಲ, ಕರಿಯಪ್ಪ ತಳವಾರ, ಕರಿಯಪ್ಪ ನಂದಿಹಾಳ, ರಾಮಣ್ಣ ಭಾವಿ, ತಿಮ್ಮನಗೌಡ ಪೊಲೀಸ್ ಪಾಟೀಲ, ಮಲ್ಲಪ್ಪ ಲಕ್ಕಲಕಟ್ಟಿ, ಹನುಮೇಶ ಉಣಚಗೇರಿ, ಯಮನಪ್ಪ ತಳವಾರ, ದೇವಪ್ಪ ನೀಡಗುಂದಿ, ಮಲ್ಲಪ್ಪ ಹಳ್ಳದ, ಈರಣ್ಣ ಹಾಲಳ್ಳಿ ಉಮೇಶಗೌಡ ಮಾಲಿಪಾಟೀಲ, ಷಣ್ಮುಖಪ್ಪ ಗುರಿಕಾರ, ಬಾಳೇಶ ಸಂಗಟಿ ಹಾಗೂ ಮಲ್ಲೇಶ ಕಂಬಳಿ ಇದ್ದರು.

ಬೆಳೆಹಾನಿ: ಇಕ್ಕಟ್ಟಿಗೆ ಸಿಲುಕಿದ ರೈತರು

ಹನುಮಸಾಗರ: ಒಂದು ವಾರದಿಂದ ಬಿಟ್ಟುಬಿಡದೆ ಸುರಿದ ಮಳೆಗೆ ಹಾಗೂ ಅತಿಯಾದ ತೇವಾಂಶದ ಕಾರಣಕ್ಕೆ ಈ ಭಾಗದ ಅಂಟರಠಾಣಾ, ಕಡೂರ, ಕಾಟಾಪೂರ, ಯರಗೋನಾಳ, ಕಲ್ಲಗೋನಾಳ, ಪುರ್ತಗೇರಿ, ಅಡವಿಭಾವಿ ಭಾಗದಲ್ಲಿ ನೂರಾರು ಎಕರೆಯಲ್ಲಿ ಬೆಳೆಯಲಾಗಿದ್ದ ಈರುಳ್ಳಿ ಬೆಳೆ ಹಾಳಾಗಿದೆ. ರೈತರು ಕಂಗಾಲಾಗಿದ್ದಾರೆ.

ಈ ಭಾಗದಲ್ಲಿ ಬಹುತೇಕ ರೈತರು ಇತರ ರೈತರಿಂದ ಜಮೀನುಗಳನ್ನು ಗುತ್ತಿಗೆ ಪಡೆದು ಈರುಳ್ಳಿ ಕೃಷಿ ಮಾಡುತ್ತಿದ್ದಾರೆ. ಸದ್ಯ ಸರ್ಕಾರ ನೀಡುವ ಬೆಳೆಹಾನಿ ಪರಿಹಾರ ಜಮೀನಿನ ಮಾಲೀಕರ ಖಾತೆಗೆ ಜಮೆ ಆಗುತ್ತದೆ. ಆದ್ದರಿಂದ ಜಮೀನು ಗುತ್ತಿಗೆ ಪಡೆದ ರೈತರಿಗೆ ಪ್ರಯೋಜನವಾಗುವುದಿಲ್ಲ.

ಗುತ್ತಿಗೆ ಪಡೆದಿರುವವರಲ್ಲಿ ಅತಿಸಣ್ಣ ರೈತರು ಹಾಗೂ ಜಮೀನು ಇಲ್ಲದ ರೈತರೂ ಸೇರಿದ್ದಾರೆ.

‘ಸಾಲ ಮಾಡಿ ಈರುಳ್ಳಿ ಬಿತ್ತನೆ ಮಾಡಿದ್ದೆವು. ಬೆಳೆ ಬಂದರೆ ಕೈಗೊಂದಿಷ್ಟು ಲಾಭ ಬಂದೀತೂ ಎಂಬ ಲೆಕ್ಕಾಚಾರದಲ್ಲಿ ಬೆವರು ಹರಿಸಿದ್ದೆವು. ಆದರೆ ಅಕಾಲಿಕ ಮಳೆ ನಮ್ಮ ಶ್ರಮವನ್ನು ನೀರುಪಾಲು ಮಾಡಿದೆ. ಸರ್ಕಾರ ನೀಡುವ ಪರಿಹಾರವೂ ನಮಗೆ ದಕ್ಕದಂತಾಗಿರುವುದರಿಂದ ಪೇಚಿಗೆ ಸಿಲುಕಿದಂತಾಗಿದೆ’ ಎಂದು ರೈತರಾದ ಶರಣಪ್ಪ, ಬಸವರಾಜ, ಭೀಮನಗೌಡ ನೋವು ತೋಡಿಕೊಂಡರು.

ಮಂಗಳವಾರ ಬೆಳೆ ಸಮೀಕ್ಷೆಗಾಗಿ ಇಲ್ಲಿಗೆ ಬಂದಿದ್ದ ತಾಲ್ಲೂಕು ಸಹಾಯಕ ತೋಟಗಾರಿಕೆ ಅಧಿಕಾರಿ ಶಿವಪ್ಪ ಶಾಂತವೀರ ಅವರಿಗೆ ರೈತರು, ಜಮೀನು ಗುತ್ತಿಗೆ ಪಡೆದವರಿಗೆ ಬೆಳೆಹಾನಿ ಪರಿಹಾರ ನೀಡಬೇಕು ಎಂದು ಮನವಿ ಸಲ್ಲಿಸಿದರು.

ಆದರೆ ತೋಟಗಾರಿಕೆ ಅಧಿಕಾರಿ ನಾವು ಕೇವಲ ಬೆಳೆ ಸಮೀಕ್ಷೆ ಮಾಡುತ್ತಿದ್ದೇವೆ ಅಷ್ಟೆ, ಆದರೆ ನೀವು ಸಲ್ಲಿಸುವ ಮನವಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.