ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನಕಗಿರಿ: ಬಸವಜಯ ಮೃತ್ಯುಂಜಯ ಸ್ವಾಮಿಗೆ‌ ಕೊಲೆ ಬೆದರಿಕೆ, ದೂರು

Published 10 ಆಗಸ್ಟ್ 2024, 15:38 IST
Last Updated 10 ಆಗಸ್ಟ್ 2024, 15:38 IST
ಅಕ್ಷರ ಗಾತ್ರ

ಕನಕಗಿರಿ: ‘ಪಂಚಮಸಾಲಿ ಸಮಾಜದ ಕೂಡಲಸಂಗಮ ಪೀಠಾಧಿಪತಿ ಬಸವಜಯ ಮೃತ್ಯುಂಜಯಸ್ವಾಮಿ ಅವರನ್ನು ಅವಹೇಳನ ಮಾಡಿ ಕೊಲೆ ಬೆದರಿಕೆ ಹಾಕಿರುವ ವ್ಯಕ್ತಿಯನ್ನು ಬಂಧಿಸಬೇಕು’ ಎಂದು ಒತ್ತಾಯಿಸಿ ಪಂಚಮಸಾಲಿ ಸಮಾಜ ಬಾಂಧವರು ಶುಕ್ರವಾರ ಸಂಜೆ‌ ಇಲ್ಲಿನ ಪಿಐ ಎಂ.‌ಡಿ. ಫೈಜುಲ್ಲಾ ಅವರಿಗೆ ಮನವಿ ಸಲ್ಲಿಸಿದರು.

‘ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಸ್ಚಾಮಿಜಿ  ಹೋರಾಟ ನಡೆಸುತ್ತಿದ್ದಾರೆ, ಈ ಹೋರಾಟಕ್ಕೆಇಡೀ ಸಮಾಜ ಬೆಂಬಲ ಸೂಚಿಸಿದೆ. ಆದರೆ ಈ  ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದ ಕಿಡಿಗೇಡಿಯೊಬ್ಬ ಸ್ವಾಮೀಜಿ ತೇಜೋವಧೆಗೆ‌ ನಿಂತಿದ್ದಾನೆ’ ಎಂದು‌ ದೂರಿದರು.

‘ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಹೇಳನ ಮಾಡಿದ್ದಾನೆ. ಆತನನ್ನು ಬಂಧಿಸಬೇಕು’ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ರಾಜ್ಯದ ಪಂಚಮಸಾಲಿ ಸಮಾಜದ ಜನಗಳ ಧಾರ್ಮಿಕ ಭಾವನೆ ಮತ್ತು ಕೂಡಲಸಂಗಮ ಪೀಠಕ್ಕೆ ಅವಮಾನ ಎಸಗಿದ ವ್ಯಕ್ತಿ ಮತ್ತು ಆತನ ಹಿಂದೆ ಇರುವ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ನೀಡಬೇಕು’ ಎಂದು ಆಗ್ರಹಿಸಿದರು.

ತಾಲ್ಲೂಕು ಅಧ್ಯಕ್ಷ ನಾಗರಾಜ ಭಾವಿಕಟ್ಟಿ, ಪಟ್ಟಣ ಪಂಚಾಯಿತಿ ಸದಸ್ಯ ಶರಣೆಗೌಡ ಪಾಟೀಲ, ಕೃಷಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ‌ ನಿರ್ದೇಶಕ ಶೇಖರಪ್ಪ ಭಾವಿಕಟ್ಟಿ, ಕೆಡಿಪಿ ಸದಸ್ಯ ಶರಣಪ್ಪ ತೆಗ್ಗಿನಮನಿ, ಪ್ರಮುಖರಾದ ಚೆನ್ನಪ್ಪ ತೆಗ್ಗಿನಮನಿ, ಶರಣಪ್ಪ ಭಾವಿಕಟ್ಟಿ, ನಾಗೇಶ ರೊಟ್ಟಿ, ವೀರೇಶ ಕಡಿ, ಅಮರೇಶ ಡ್ರೈವರ್, ಶರಣಪ್ಪ ಬಜಾರದ, ಪ್ರಶಾಂತ ತೆಗ್ಗಿನಮನಿ, ಬಸವರಾಜ ಭಾವಿಕಟ್ಟಿ, ವಿನಾಯಕ ಭಾವಿಕಟ್ಟಿ, ದೊಡ್ಡಪ್ಪ ಕೊಡ್ಲಿ, ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT