ಗುರುವಾರ , ಮಾರ್ಚ್ 30, 2023
24 °C

ಬಿಟ್ಟಿ ಚಾಕರಿ: ಪರಿಹಾರ ನೀಡಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ‘ಬಿಟ್ಟಿ ಚಾಕರಿ’ ಮಾಡುವ ಕಾರ್ಮಿಕರಿಗೆ ಜೀತ ಕಾರ್ಮಿಕ ಪದ್ಧತಿ ನಿರ್ಮೂಲನೆ ಅಡಿ ಅಗತ್ಯ ಸೌಲಭ್ಯಗಳನ್ನು ನೀಡಿ ಚಾಕರಿಯಿಂದ ಮುಕ್ತಿ ನೀಡಬೇಕು‘ ಎಂದು ಆಗ್ರಹಿಸಿ ಜೀವಿಕ ಜೀತ ವಿಮುಕ್ತ ಕರ್ನಾಟಕ ಸಮಿತಿ ಸದಸ್ಯರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಜೀತ ಮುಕ್ತಿಗಾಗಿ ಸಂಘಟನೆಯ ವತಿಯಿಂದ ಎಲ್ಲ ತಾಲ್ಲೂಕಿನಲ್ಲಿ ಹೋರಾಟ ನಡೆಸಿ ಕಾಯ್ದೆ ಜಾರಿಗೆ ಬರುವಲ್ಲಿ ಶ್ರಮಿಸಿದೆ. ಈಗ ‘ಬಿಟ್ಟಿ ಚಾಕರಿ‘ ಎಂಬ ಅನಿಷ್ಠ ಪದ್ಧತಿ ಇನ್ನೂ ಜಾರಿಯಲ್ಲಿ ಇದ್ದು, ಅದನ್ನು ಆಡಳಿತ ಕೊನೆಗೊಳಿಸಬೇಕು. ಕೊಪ್ಪಳ ತಾಲ್ಲೂಕಿನ 50, ಕುಷ್ಟಗಿ 45, ಯಲಬುರ್ಗಾ-11, ಗಂಗಾವತಿ-10 ಜನರು ಇದ್ದಾರೆ.

ಆದ್ದರಿಂದ ಈ ಚಾಕರಿ ಕೂಡಾ ಜೀತ ಪದ್ಧತಿಯ ಸ್ವರೂಪದ ಅನಿಷ್ಟ ಪದ್ಧತಿ ಎಂದು ಗುರುತಿಸಿ ಸಮೀಕ್ಷೆ ನಡೆಸಿ 117 ಜನರನ್ನು ಪಂಚಾಯತ್ ರಾಜ್‌ ಇಲಾಖೆಗೆ ಗುರುತಿಸಿ ಪಟ್ಟಿ ನೀಡಲಾಗಿದೆ. ಅಲ್ಲದೆ ಉಪವಿಭಾಧಿಕಾರಿಗೆ ಕೂಡಾ ವಿವರವಾದ ಮನವಿ ಸಲ್ಲಿಸಿದ್ದು, ಅವರಿಗೆ ಪುನರ್‌ ವಸತಿ ಕಲ್ಪಿಸಬೇಕು ಮತ್ತು ಕಂದಾಯ ಇಲಾಖೆಯಿಂದ ಪಂಚಾಯಿತಿ ವ್ಯಾಪ್ತಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಆಗ್ರಹಿಸಿದರು.

ಅರ್ಜಿ ಸಲ್ಲಿಸಿದ ಬಿಟ್ಟಿ ಚಾಕರಿ ಮಾಡುವ ಜನರನ್ನು ಗುರುತಿಸಿ ಅವರನ್ನು ಕೆಲಸದಿಂದ ಬಿಡುಗಡೆ ಮಾಡಿ ಬಿಡುಗಡೆ ಪತ್ರ ನೀಡಬೇಕು. ತಾತ್ಕಾಲಿಕ ಪರಿಹಾರ, ಸಮಗ್ರ ಪುನರ್‌ ವಸತಿ ಕಲ್ಪಿಸುವುದು ಮತ್ತು ಜೀತದಾಳುಗಳಿಗೆ ಇರುವ ಸೌಲಭ್ಯಗಳನ್ನು ನೀಡಬೇಕು ಎಂದು ಸಂಘಟನೆಯ ಜಿಲ್ಲಾ ಉಸ್ತುವಾರಿ ಸಂಯೋಜಕ ಪಿ.ಶ್ರೀನಿವಾಸ್‌ ಹೆಚ್ಚುವರಿ ಜಿಲ್ಲಾಧಿಕಾರಿ ಮಾರುತಿ.ಎಂ.ಪಿ ಅವರಿಗೆ ಸಲ್ಲಿಸಿ ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು