ಕನಕಗಿರಿ: ಪಟ್ಟಣ ಪಂಚಾಯಿತಿ ಸದಸ್ಯ, ಪೌರಕಾರ್ಮಿಕ ಹಾಗೂ ಬಾಲಕಿ ಸೇರಿದಂತೆ ಒಟ್ಟು 8 ಜನರಿಗೆ ನಾಯಿ ಕಚ್ಚಿದ್ದು, ಗಾಯಗೊಂಡಿದ್ದಾರೆ.

ಪಟ್ಟಣ ಪಂಚಾಯಿತಿ ಸದಸ್ಯ ಶರಣೇಗೌಡ ಪಾಟೀಲ, ಪೌರಕಾರ್ಮಿಕ ಬಸವರಾಜ ಛಲವಾದಿ ನಾಯಿ ಕಚ್ಚಿಸಿಕೊಂಡವರು. ಇಲ್ಲಿನ ಗೌಡರ ಓಣಿಯಲ್ಲಿ ಈ ಘಟನೆ ನಡೆದಿದ್ದು, ನಾಯಿ ಕಚ್ಚಿದ ಬಗ್ಗೆ ಪೌರಕಾರ್ಮಿಕರ ಗಮನಕ್ಕೆ ಅಲ್ಲಿನ ನಿವಾಸಿಗಳು ತಂದಿದ್ದಾರೆ. ನಾಯಿ ಸಾಯಿಸಿದರೆ ಪಾಪ ಬರುತ್ತದೆ ಎಂದು ಪೌರಕಾರ್ಮಿಕರ ಮುಖಂಡರೊಬ್ಬರು ಸಮಾಜಾಯಿಷಿ ನೀಡಿ ನಾಯಿಯನ್ನು ಹಾಗೆ ಬಿಟ್ಟಿರುವುದು ಕಡಿತ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಗೌಡರ ಓಣಿ ನಿವಾಸಿಯೊಬ್ಬರು ಅಳಲು ತೋಡಿಕೊಂಡರು.

ಬಸವಂತಪ್ಪ, 3 ವರ್ಷದ ಬಾಲಕಿ ಯುವನ್, ನಂದೀಶ(5), ವೀರೇಶ (25), 9ನೇ ವಾರ್ಡ್ ನಿವಾಸಿ ನಾಫಿಜಾನ್(14) ಇತರರು ಗಾಯಗೊಂಡಿದ್ದಾರೆ. ಆಕ್ರೋಶಗೊಂಡ ಗ್ರಾಮಸ್ಥರು ನಾಯಿಯನ್ನು ಕಟ್ಟಿಗೆಯಿಂದ ಹೊಡೆದು ಸಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.