ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಂಗಾವತಿ | ಹುಚ್ಚುನಾಯಿ ಕಡಿತ: ಮೂವರಿಗೆ ಗಾಯ

Published : 12 ಆಗಸ್ಟ್ 2024, 14:41 IST
Last Updated : 12 ಆಗಸ್ಟ್ 2024, 14:41 IST
ಫಾಲೋ ಮಾಡಿ
Comments

ಗಂಗಾವತಿ: ತಾಲ್ಲೂಕಿನ ವಿರುಪಾಪುರಗಡ್ಡೆ ಗ್ರಾಮದಲ್ಲಿ ಶನಿವಾರ ರಾತ್ರಿ ಹುಚ್ಚುನಾಯಿ ಕಡಿತದಿಂದ ಬಾಲಕಿ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ವಿರುಪಾಪುರಗಡ್ಡೆ(ಬಿಂಚಿಕುಟ್ರಿ) ಗ್ರಾಮದ ಬಾಲಕಿ ನಿಹಾರಿಕ ನಾಗೇಶನಾಯ್ಕ (8), ಶೇಷಾದ್ರಿ ಬಾಲಚಂದ್ರ(36), ಅನುಷಾ(ಹನುಮಂತಿ)(30) ಎಂದು ಗುರುತಿಸಲಾಗಿದೆ.

ಎಂದಿನಂತೆ ಶನಿವಾರ ಬಾಲಕಿ ನಿಹಾರಿಕಾ ಮನೆಯಿಂದ ಹೊರಬಂದ ವೇಳೆ ಹುಚ್ಚುನಾಯಿ ಏಕಾಏಕಿ ದಾಳಿ ನಡೆಸಿದೆ. ಹಣೆ, ಮೂಗು, ಕಣ್ಣುಗಳ ಭಾಗದಲ್ಲಿ ತೀವ್ರವಾಗಿ ಗಾಯಗಳಾಗಿವೆ. ಕೂಡಲೇ ಆನೆಗೊಂದಿ ಪ್ರಾಥಮಿಕ ಚಿಕಿತ್ಸಾ ಕೇಂದ್ರ ತೆರಳಿದ್ದು, ಅಗತ್ಯ ಚಿಕಿತ್ಸಾ ಸೌಲಭ್ಯವಿರದ ಕಾರಣ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಬಾಲಕಿ ಮೇಲೆ ನಾಯಿ ದಾಳಿ ನಡೆಸಿದ ವಿಷಯ ತಿಳಿದು ಅದನ್ನು ನೋಡಲು ಶೇಷಾದ್ರಿ, ಅನುಷಾ ಅವರ ಮೇಲೂ ನಾಯಿ ದಾಳಿ ನಡೆಸಿದ್ದು, ಕಾಲು, ಮೈ, ಮುಖದ ಮೇಲೆ ಗಾಯಗಳಾಗಿವೆ. ಸದ್ಯ ಇವರು ಪ್ರಾಥಮಿಕ ಹಂತದ ಚಿಕಿತ್ಸೆ ಪಡೆದಿದ್ದಾರೆ‌.

ತೀವ್ರವಾಗಿ ಗಾಯಗೊಂಡು ಬಳ್ಳಾರಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿ ನಿಹಾರಿಕಳಿಗೆ ವೈದ್ಯರು ಆಪರೇಷನ್ ಮಾಡುವ ಕುರಿತು ಪಾಲಕರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT