ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಸಮಸ್ಯೆಯಾಗಬಹುದಾದ 9 ಗ್ರಾಮಗಳಿಗೆ ಪರ್ಯಾಯವಾಗಿ ನೀರೊದಗಿಸಲು ತಾಲ್ಲೂಕಾಡಳಿತ ಸನ್ನದ್ಧವಾಗಿದೆ.
– ಲಕ್ಷ್ಮಿದೇವಿ, ತಾ.ಪಂ ಇಒ ಕಾರಟಗಿ
ಕೊಳವೆಬಾವಿ ಹಾಗೂ ಕೆರೆಯ ನೀರನ್ನು ಸೇರಿಸಿಯೇ ಬಿಡುತ್ತಿರುವುದರಿಂದ ಇಲ್ಲಿಯವರೆಗೂ ನೀರಿನ ಸಮಸ್ಯೆ ಇಲ್ಲ. ಆಗಾಗ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದ ರಾಮನಗರದತ್ತ ಅಧಿಕಾರಿಗಳ ಚಿತ್ತ ಇರಲಿ.
– ಕೆಂಚಪ್ಪ ಅಂಗಡಿ, ರಾಮನಗರ
ನೀರಿನ ಪೂರೈಕೆ ಚೆನ್ನಾಗಿದೆ. ಮಳೆಯಾಗಿದ್ದರಿಂದ ತುಂಬಾ ಅನುಕೂಲವಾಗಿದೆ. ಆದರೂ ಗ್ರಾ.ಪಂಯ ಕೆಲ ವಾರ್ಡ್‌ಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕಿದೆ.