ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ಕುಡಿಯುವ ನೀರಿಗೆ ಪರದಾಟ; ಇಂದಿರಾ ನಗರದಲ್ಲಿ ಜನರ ನಿಲ್ಲದ ಗೋಳಾಟ

Last Updated 28 ಏಪ್ರಿಲ್ 2020, 2:36 IST
ಅಕ್ಷರ ಗಾತ್ರ

ಕೊಪ್ಪಳ: ತಾಲ್ಲೂಕಿನ ಇಂದರಗಿ ಗ್ರಾಮದ ಇಂದಿರಾ ನಗರದಲ್ಲಿ ಕಳೆದ ಎಂಟು ದಿನಗಳಿಂದ ಕುಡಿಯುವ ನೀರಿನ ತೀವ್ರ ಉಂಟಾಗಿದ್ದು, ಗ್ರಾಮಸ್ಥರು ಪರದಾಡುವಂತೆ ಆಗಿದೆ.

ಗ್ರಾಮದಲ್ಲಿರುವ ಕೊಳವೆ ಬಾವಿ ಮೋಟಾರ್ ಸುಟ್ಟು ಹೋಗಿದ್ದು, ನೀರು ಸರಬುರಾಜಿನಲ್ಲಿ ತೀವ್ರ ವ್ಯತ್ಯಯವಾಗಿದೆ. ಇದರಿಂದ ಸಮೀಪದ ಜಲಮೂಲಗಳಿಂದ ನೀರನ್ನು ಜನತೆ ತರಬೇಕಾಗಿದ್ದು, ನಿತ್ಯ ಈ ಕೆಲಸಕ್ಕೆ ಬಹುತೇಕ ಸಮಯವನ್ನು ಮೀಸಲಿಡಬೇಕಾಗಿದೆ.

ಗ್ರಾಮದಲ್ಲಿ ಸಾವಿರಕ್ಕೂ ಜನರು ವಾಸಿಸುತ್ತಿದ್ದು, ಇಂದಿರಾ ನಗರದಲ್ಲಿ ಕೃಷಿ ಕೂಲಿ ಕಾರ್ಮಿಕರು, ಬಡವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ನೀರಿನ ನಲ್ಲಿಗೆ ಬೆಳಿಗ್ಗೆಯಿಂದಲೇ ಸರತಿಯಲ್ಲಿ ಇಟ್ಟು ಕಾಯುವಂತೆ ಆಗಿದೆ. ದಿನದಿಂದ ಬಿಸಿಲಿನ ತಾಪ ಏರಿಕೆಯಾಗುತ್ತಿದ್ದು, ಲಾಕ್‌ಡೌನ್‌ ಕೂಡಾ ಜನರನ್ನು ಹೈರಾಣು ಮಾಡಿದೆ. ಕೃಷಿ ಕಾಯಕ್ಕೂ ಹೋಗದೇ ಬರುವ ನೀರಿಗಾಗಿ ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ.

ಈ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೊಳವೆ ಬಾವಿ ಮೋಟಾರ್ ದುರಸ್ತಿ ಮಾಡಿಸಲಾಗುತ್ತಿದ್ದು, ಶೀಘ್ರ ನೀರು ಪೂರೈಸಲಾಗುವುದು ಎಂದು ಹೇಳುತ್ತಾರೆ. ಆದರೆ ಜನರಿಗೆ ಮಾತ್ರ ನಿತ್ಯ ತೊಂದರೆಯಾಗುತ್ತಿದ್ದು, ನಿಗದಿತ ವೇಳೆಯಲ್ಲಿ ಟ್ಯಾಂಕರ್‌ ಮೂಲಕವಾದರೂ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಒತ್ತಾಯಿಸುತ್ತಾರೆ.

ಕೊಪ್ಪಳ-ಗಂಗಾವತಿ ಮಾರ್ಗದಲ್ಲಿ ಬರುವ ಈ ಗ್ರಾಮ ಪ್ರಮುಖವಾಗಿದ್ದು, ಪ್ರತಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಬೇಸಿಗೆ ಪೂರ್ವದಲ್ಲಿಯೇ ಅಗತ್ಯ ಸಿದ್ಧತೆಯೊಂದಿಗೆ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಇಚ್ಛಾಶಕ್ತಿ ಪ್ರದರ್ಶನ ಮಾಡುತ್ತಿಲ್ಲ ಎಂಬುವುದು ಗ್ರಾಮಸ್ಥರ ಆರೋಪವಾಗಿದೆ.

ಕುಡಿಯುವ ನೀರು ಮತ್ತು ಮೂಲಸೌಕರ್ಯ ಇಲಾಖೆ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಇತ್ತ ಗಮನಹರಿಸಿ ಬೇಸಿಗೆಯ ಅವಧಿಯಲ್ಲಿ ಈ ಬವಣೆಯನ್ನು ತಪ್ಪಿಸಬೇಕು ಎಂದು ಮೇಲಿಂದ ಮೇಲೆ ಮನವಿ ಮಾಡಿದ್ದಾರೆ.

'ಜನರ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ಕುಡಿಯುವ ನೀರಿಗೆ ಇನ್ನೂ ನಾವು ಪರದಾಡುತ್ತಿರಬೇಕಾದರೆ ಉಳಿದ ಕೆಲಸ ಮಾಡುವುದಾದರೂ ಹೇಗೆ' ಎಂದು ಗ್ರಾಮದ ಅಶೋಕ ಎಂಬುವರು ಬೇಸರದಿಂದ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT