ಕಾರಟಗಿ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಪಟ್ಟಣದ ಚಿರನೂತನ ಮಹಿಳಾ ಸಂಘದ ಪದಾಧಿಕಾರಿಗಳು, ಸದಸ್ಯರು ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿರುವ 96 ವಯಸ್ಸಿನ ತೊಗಲು ಗೊಂಬೆಯಾಟದ ಸಾಧಕಿ ಭೀಮಮ್ಮ ದೊಡ್ಡಬಾಳಪ್ಪ ಶಿಳ್ಳಿಕ್ಯಾತರ್ ಅವರನ್ನು ಸನ್ಮಾನಿಸಿ, ಗೌರವಿಸಿ, ನಗದು ಸಹಾಯ ಮಾಡಿದರು.

’ಕೊಪ್ಪಳ ತಾಲ್ಲೂಕಿನ ಮೋರನಾಳದಲ್ಲಿರುವ ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಿದೆವು. ಇಳಿ ವಯಸ್ಸಿನಲ್ಲೂ ಭೀಮಮ್ಮ, ಲವಲವಿಕೆಯಿಂದ, ಉತ್ಸಾಹದಿಂದ ರಾಮಾಯಣ, ಮಹಾಭಾರತ ಕಥೆ ಹೇಳಿದರು. ಜಿಲ್ಲೆಯ ಕಾರಟಗಿ ಸೇರಿದಂತೆ ವಿವಿಧೆಡೆ ಊರುಗಳ ಹೆಸರನ್ನು ಹೇಳಿ ನಮ್ಮನ್ನೆಲ್ಲಾ ನಿಬ್ಬೆರಗಾಗುವಂತೆ ಮಾಡಿದ್ದು ಇನ್ನೂ ಕಣ್ಮುಂದೆಯೇ ಇದೆ’ ಎಂದು ಸಂಘದ ಸಿ. ಎಚ್. ಮೀನಾಕ್ಷಿ ಶರಣಪ್ ಪ್ರತಿಕ್ರಿಯಿಸಿದರು.

ಪುರಸಭೆ ಸದಸ್ಯೆ ಸುಪ್ರಿಯಾ ಅರಳಿ, ಶಂಕ್ರಮ್ಮ ಸಜ್ಜನ್, ಸಾವಿತ್ರಿ ಎಲ್ವಿಟಿ, ಸುವರ್ಣಲತಾ ಪಾಟೀಲ್, ಸುಮಾ ಉದಯರಾಜ್, ಪುಷ್ಪಾ ಸುಂಕದ, ಜ್ಯೋತಿ ಕೆಂಗಲ್, ಉಮಾ ಚಂದ್ರಮೌಳಿ, ರೂಪಾ ಸುಂಕದ, ಸೌಮ್ಯ ಕಂದಗಲ್, ಶಾಂತಾ ರವಿ ಹಿರೇಮಠ, ರೇಣುಕಾ ಆರಾಪುರ, ನಂದಿನಿ ಬಿಲ್ಗಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.