ಬುಧವಾರ, ಜೂನ್ 23, 2021
21 °C
ಕೊರೊನಾ ಹಾವಳಿಯಿಂದ ಕಂಗಾಲಾದ ರೈತ

ಕುಕನೂರು: ಹೊಲದಲ್ಲಿಯೇ ಉಳಿದ ಪೇರಲ

ಮಂಜುನಾಥ ಅಂಗಡಿ Updated:

ಅಕ್ಷರ ಗಾತ್ರ : | |

Prajavani

ಕುಕನೂರು: ಕೊರೊನಾ ಸೋಂಕಿನ ಹಾವಳಿಯಿಂದ ತಾಲ್ಲೂಕಿನಲ್ಲಿ ತೋಟಗಾರಿಕೆ ಬೆಳೆ ಬೆಳೆದ ರೈತರು ಸಂಕಷ್ಟ ಎದುರಿಸುವಂತಾಗಿದೆ. ತಾಲ್ಲೂಕಿನ ಇಟಗಿ ಗ್ರಾಮದ ಕಳಕಪ್ಪ ಬರದೂರ ಎಂಬುವವರು 3 ಎಕರೆಯಲ್ಲಿ ಪೇರಲ ಬೆಳೆದಿದ್ದಾರೆ.

ಈಗ ಪೇರಲ ಕಟಾವು ಹಂತಕ್ಕೆ ಬಂದಿವೆ. ಕೊರೊನಾ ಹಾವಳಿಯಿಂದ ಖರೀದಿದಾರರು, ಸಗಟು ವ್ಯಾಪಾರಸ್ಥರು ಹಣ್ಣುಗಳ ಖರೀದಿಗೆ ಬಾರದಿರುವುದು ದರ ಕುಸಿತಕ್ಕೆ ಕಾರಣವಾಗಿದೆ. ಚಿಲ್ಲರೆ ವ್ಯಾಪಾರಿಗಳು ಖರೀದಿಗೆ ಮುಂದಾದರೂ ಕೂಡ ಅತಿ ಕಡಿಮೆ ದರದಲ್ಲಿ ಖರೀದಿಸುವುದಾಗಿ ಹೇಳುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

ಮೊದಲು ಪ್ರತಿ ಕೆಜಿಗೆ ₹ 40 ಗೆ ಮಾರಾಟವಾಗುತ್ತಿದ್ದ ಪೇರಲ ಹಣ್ಣಿನ ಬೆಲೆ ₹ 20 ಕ್ಕೆ ಕುಸಿದಿದೆ.

‘ಹೆಚ್ಚುತ್ತಿರುವ ಉಷ್ಣತೆಯಿಂದ ಪೇರಲ ಹಣ್ಣುಗಳು ಕೆಂಪು, ಕಂದು ಬಣ್ಣಕ್ಕೆ ತಿರುಗುತ್ತಿವೆ. ನಿರ್ವಹಣೆಗೆ ಕೂಲಿಕಾರರು ಬರುತ್ತಿಲ್ಲ. ಇಳುವರಿಯಲ್ಲಿಯೂ ಕುಸಿತವಾಗಿದೆ. ಕಾರಣ ಪೇರಲ ಹಣ್ಣಿನ ದರದ ಬೇಡಿಕೆ ಕಡಿಮೆಯಾಗಿ ನಷ್ಟ ಅನುಭವಿಸುವಂತಾಗಿದೆ’ ಎಂದು ರೈತ ಕಳಕಪ್ಪ ಬೇಸರ ವ್ಯಕ್ತಪಡಿಸಿದರು.

ಪೇರಲ ಬೆಳೆದ ರೈತರು ದರ ಕುಸಿತದಿಂದ ಕಂಗಾಲಾಗಿದ್ದು ಸರ್ಕಾರ ತೋಟಗಾರಿಕೆ ಬೆಳೆಗಳ ಖರೀದಿಗೆ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ಬೆಳೆ ಹಾನಿ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಮಾತನಾಡಿ, ‘ತಾಲ್ಲೂಕಿನಲ್ಲಿ ವಿವಿಧ ಬೆಳೆಗಳನ್ನು ಬೆಳೆದ ರೈತರು ಲಾಭದ ನಿರೀಕ್ಷೆಯಲ್ಲಿದ್ದರು. ಈಗ ಖರೀದಿದಾರರ ಕೊರತೆ ದರ ಕುಸಿತಕ್ಕೆ ಕಾರಣವಾಗಿದೆ’ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.