ಮ್ಯಾಂಚೆಸ್ಟರ್: ಭಾರತ ಕ್ರಿಕೆಟ್ ತಂಡದ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಪರಾಕ್ರಮ ಮೆರೆದಿರುವ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್, ಎರಡು ವಿಶೇಷ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡರು.

ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮೊದಲ ಇನಿಂಗ್ಸ್ನಲ್ಲಿ 358 ರನ್ ಗಳಿಸಿ ಸರ್ವಪತನ ಕಂಡಿದೆ. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್, 699 ರನ್ಗಳನ್ನು ಪೇರಿಸಿ 311 ರನ್ಗಳ ಭಾರಿ ಮುನ್ನಡೆ ಸಾಧಿಸಿದೆ.

ಸ್ಟೋಕ್ಸ್ ದಾಖಲೆ
ಭಾರತದ ಬ್ಯಾಟಿಂಗ್ ವೇಳೆ ಬೌಲಿಂಗ್ನಲ್ಲಿ ಅಮೋಘ ಸಾಮರ್ಥ್ಯ ತೋರಿದ್ದ ಸ್ಟೋಕ್ಸ್, 72 ರನ್ ನೀಡಿ ಐದು ವಿಕೆಟ್ ಗೊಂಚಲು ಸಂಪಾದಿಸಿದ್ದರು. ಅವರ ಆಟದ ನೆರವಿನಿನಿಂದಾಗಿ ಟೀಂ ಇಂಡಿಯಾವನ್ನು 360ಕ್ಕಿಂತ ಕಡಿಮೆ ಮೊತ್ತಕ್ಕೆ ನಿಯಂತ್ರಿಸಲು ಸಾಧ್ಯವಾಗಿತ್ತು. ಬಳಿಕ, ಬ್ಯಾಟಿಂಗ್ನಲ್ಲೂ ಅಬ್ಬರಿಸಿದ ಅವರು 198 ಎಸೆತಗಳಲ್ಲಿ 141 ರನ್ ಗಳಿಸಿ ಔಟಾದರು.

ಇದರೊಂದಿಗೆ ಒಂದೇ ಪಂದ್ಯದ ಇನಿಂಗ್ಸ್ವೊಂದರಲ್ಲಿ ಐದು ವಿಕೆಟ್ ಹಾಗೂ ಶತಕ ಸಾಧಿಸಿದ ನಾಯಕರ ಸಾಲಿಗೆ ಸೇರಿಕೊಂಡರು. ಈ ಹಿಂದೆ ಬೇರೆ ಬೇರೆ ತಂಡಗಳ ನಾಲ್ವರು ನಾಯಕರಾಗಿ ಈ ಸಾಧನೆ ಮಾಡಿದ್ದರು.

ವೆಸ್ಟ್ ಇಂಡೀಸ್ನವರಾದ ಗಸ್ ಅಟ್ಕಿನ್ಸನ್ 1955ರಲ್ಲಿ ಆಸ್ಟ್ರೇಲಿಯಾ ವಿರುದ್ಧ, ಗ್ಯಾರಿ ಸೋಬರ್ಸ್ 1966ರಲ್ಲಿ ಇಂಗ್ಲೆಂಡ್ ವಿರುದ್ಧ, ಪಾಕಿಸ್ತಾನದವರಾದ ಮುಷ್ತಾಕ್ ಮೊಹಮ್ಮದ್ 1977ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ, ಇಮ್ರಾನ್ ಖಾನ್ 1983ರಲ್ಲಿ ಭಾರತದ ವಿರುದ್ಧ ಇಂತಹ ಅಸಾಧಾರಣ ಆಟವಾಡಿದ್ದರು.
.ವೃತ್ತಿಪರ ಕ್ರಿಕೆಟ್ಗೆ ವಿದಾಯ ಹೇಳಿದ ಕಡೂರಿನ ವೇದಾ ಕೃಷ್ಣಮೂರ್ತಿ: ಭಾವುಕ ಪೋಸ್ಟ್.ಟೆಸ್ಟ್ನಲ್ಲಿ ಹೆಚ್ಚು ರನ್ | 2ನೇ ಸ್ಥಾನಕ್ಕೇರಿದ ರೂಟ್: ಸಚಿನ್ ದಾಖಲೆಗೆ ಆಪತ್ತು!.
ಇದಷ್ಟೇ ಅಲ್ಲ. ಟೆಸ್ಟ್ ಕ್ರಿಕೆಟ್ನಲ್ಲಿ 7,000 ರನ್ ಹಾಗೂ 200 ವಿಕೆಟ್ ಗಳಿಸಿದ ಮೂರನೇ ಕ್ರಿಕೆಟಿಗ ಎಂಬ ಶ್ರೇಯಕ್ಕೂ ಸ್ಟೋಕ್ಸ್ ಭಾಜನರಾದರು. ಇದಕ್ಕೂ ಮೊದಲು ಗ್ಯಾರಿ ಸೋಬರ್ಸ್ ಹಾಗೂ ಜಾಕ್ ಕಾಲಿಸ್ ಈ ಸಾಧನೆ ಮಾಡಿದ್ದರು.

ಈ ವರೆಗೆ 115 ಪಂದ್ಯಗಳ 206 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಸ್ಟೋಕ್ಸ್ 7,032 ರನ್ ಗಳಿಸಿದ್ದಾರೆ. ಇಷ್ಟೇ ಪಂದ್ಯಗಳ 169 ಇನಿಂಗ್ಸ್ಗಳಿಂದ 229 ವಿಕೆಟ್ಗಳನ್ನೂ ಜೇಬಿಗಿಳಿಸಿದ್ದಾರೆ.

7,000 ರನ್+200 ವಿಕೆಟ್ ಸಾಧನೆ ಮಾಡಿದವರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.